ಗುಜರಾತ್ಸುವರ್ಣ ಗಿರಿ ಟೈಮ್ಸ್
ಠಾಣೆಯಲ್ಲಿದ್ದ ಮದ್ಯವನ್ನು ಕದ್ದ ಗುಜರಾತ್ ಪೊಲೀಸರು !!

ಅಹ್ಮದಾಬಾದ್: ಪ್ರಕರಣದಲ್ಲಿ ವಶಪಡಿಸಿಕೊಂಡು ಠಾಣೆಯಲ್ಲಿಟ್ಟಿದ ಮದ್ಯವನ್ನೇ ಕದ್ದು ಗುಜರಾತ್ ಪೊಲೀಸರಿಗೆ ಕಳಂಕ ತಂದಿದ್ದಾರೆ.
ಮಹಿಸಾಗರ ಜಿಲ್ಲೆಯ ಬಾರಕೋರ್ ಠಾಣೆಯಲ್ಲಿ ಪೊಲೀಸರು ರೂ 1.57 ಲಕ್ಷದ ಮದ್ಯವನ್ನು ವಸಪಡಿಸಿಕೊಂಡಿದ್ದರು. ನವೆಂಬರ್ ೧೩ ರಂದು ವಶಪಡಿಸಿಕೊಂಡ ಮದ್ಯವನ್ನು ನೋಡಲು ಹೋದಾಗ ೪೦೦ ರಲ್ಲಿ ಒಟ್ಟು ೧೨೫ ಬಾಟಲಗಳು ನಾಪತ್ತೆ ಆಗಿದ್ದವು ಮತ್ತು ಅದರ ಜೊತೆ ೪೦ ಕ್ಕೂ ಹೆಚ್ಚು ಸೀಲಿಂಗ್ ಪ್ಯಾನಗಳು ಕೂಡಾ ನಾಪತ್ತೆ ಆಗಿದ್ದವಂತೆ.
ಪ್ರಾಥಮಿಕ ತನಿಖೆಯಿಂದ ಮದ್ಯ ರಾತ್ರಿ ಕ್ಯಾಮರಾವನ್ನು ಬಂದ ಮಾಡಿ ಬಾಟಲಗಳನ್ನು ಮಹಿಳಾ ಶೆಲ್ ಗೆ ಶಿಪ್ಟ್ ಮಾಡಿ ಅಲ್ಲಿಂದ ಕದ್ದಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಠಾಣೆಯ ಎ.ಎಸ್.ಆಯ್. ರಣವತ್ತ ಸಿನ್ಹಾ ರವರ ದೂರು ನೀಡಿದ್ದು ಈ ಕುರಿತು ಒಟ್ಟು ಆರು ಜನ ಪೊಲೀಸ್ ಸಿಬ್ಬಂಧಿಗಳನ್ನು ಬಂದಿಸಲಾಗಿದೆ ಎಂದು ತಿಳಿದು ಬಂದಿದೆ.