ಕೆ ಇ ಎ ಪರೀಕ್ಷೆ ಆಕ್ರಮ: ಬೆಳಗಾವಿ ಜಿಲ್ಲೆ ಅಥಣಿಗೂ ಹಬ್ಬಿದ ಆರ್ ಡಿ ಪಾಟೀಲ್ ನಂಟು

ಬೆಳಗಾವಿ: ಕೆ ಇ ಎ ಪರೀಕ್ಷೆಯಲ್ಲಿ ಬ್ಯೂಟಿತ್ ಸಾಧನ ಬಳಸಿ ಕರ್ನಾಟಕ ಪರೀಕ್ಷಾ ಪದಾಧಿಕಾರ ನೇಮಕಾತಿ ಪರೀಕ್ಷೆ ಬರೆದ ಆಕ್ರಮ ಪ್ರಕರಣದಲ್ಲಿ ಬಂದಿತ ಆರೋಪಿ ಆರ್ ಡಿ ಪಾಟೀಲ್ ನಂಟು ಬೆಳಗಾವಿ ಜಿಲ್ಲೆಯ ಅಥಣಿಗೂ ಹಬ್ಬಿದೆ.
ಅಥಣಿಯ ಕರ್ನಾಟಕ ನೀರಾವರಿ ನಿಗಮ ಸಹಾಯಕ ಇಂಜಿನಿಯರ್ ರುದ್ರಗೌಡ ಎಂ ಎಂ, ರವರು ಆರ್ ಡಿ ಪಾಟೀಲ್, ಅವರ ಕೆಲಸದ ಆರೋಪದ ಮೇಲೆ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರುದ್ರಗೌಡರು ಹಿಪ್ಪರಗಿ ಜಲಾಶಯದ ಪುನರ್ ವಸತಿ ನಿರ್ಮಾಣ, ಉಪ ವಿಭಾಗ ಕಚೇರಿಯಲ್ಲಿ ಕಳೆದ ಮೂರು ವರ್ಷ ಗಳಿಂದ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲ್ಲೂರು ನೆಲ್ಲೂರು ಗ್ರಾಮದ ವ್ಯಕ್ತಿ ಕಳೆದ 9 ದಿನದಿಂದ ಕಚೇರಿಗೆ ಗೈರು ಹಾಜರು ಇದ್ದಾರೆ.
ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳ ಪರೀಕ್ಷೆಗೆ ಸಹಾಯ ಮಾಡುತ್ತಿರುವ ಆರೋಪ ರುದ್ರಗೌಡರು, ಮೇಲೆ ಕೇಳಿ ಬಂದಿದೆ. ತಾವೇ ಅರ್ ಡಿ ಪಾಟೀಲ್ ಜೊತೆಗೆ ಹಣ ಕೇಳಿ ಡೀಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೇ 17 ಅಭ್ಯರ್ಥಿಗಳ ಹಾಲ್ ಟಿಕೆಟ್ ಸಂಗ್ರಹಿಸಿ ಆರ್ ಡಿ ಪಾಟೀಲ್ ಗೆ ನೀಡಿರುವ ಮಾಹಿತಿ ಇದೆ ಎನ್ನಲಾಗಿದೆ. ಪರೀಕ್ಷೆ ನಡೆಯುವ ಸಂದರ್ಭ ದಲ್ಲಿ ಆರ್ ಡಿ ಪಾಟೀಲ್ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂಬ ಹಿನ್ನೆಲೆಯಲ್ಲಿ ಈಗ ಸಿಐಡಿ ಪೊಲೀಸರು ರುದ್ರೇಗೌಡರನ್ನು ವಶಕ್ಕೆ ಪಡೆದು ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.