ಬೆಂಗಳೂರುಸುವರ್ಣ ಗಿರಿ ಟೈಮ್ಸ್
ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಮನೆಗೆ ದೀಪಾಲಂಕಾರ ಪ್ರಕರಣ: 68.526 ರೂ. ದಂಡ ವಿಧಿಸಿದ ಬೆಸ್ಕಾಂ

ಬೆಂಗಳೂರು: ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಮನೆಗೆ ದೀಪಾಲಂಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ದಂಡ ಹಾಕಿದ್ದಾರೆ.
68526 ರೂ. ದಂಡ ಹಾಕಿದ್ದಾರೆ. ಅದನ್ನು ನಾನು ಪಾವತಿಸಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹುಡುಗರ ಅಚಾತುರ್ಯದಿಂದ ಆಗಿರುವ ಪ್ರಕರಣಕ್ಕೆ ಕರೆಂಟ್ ಕಳ್ಳ ಎಂದರೆ ಹೇಗೆ? ಕಳ್ಳ ಬಿಲ್ ಕೊಟ್ಟರೋ ಏನೋ ಗೊತ್ತಿಲ್ಲ. ಕರೆಂಟ್ ಕಳ್ಳ ಅನ್ನುವುದನ್ನು ನಿಲ್ಲಿಸಬೇಕು.
ಮನೆಗೆ ಈಗಾಗಲೇ 33 ಕೆವಿ ಅನುಮತಿ ಇದೆ. 2.5 ಕೆವಿ ಗೆ ದಂಡ ಹಾಕಿದ್ದಾರೆ. ದಂಡ ಹಾಕುವಲ್ಲೂ ಲೋಪ ಎಸಗಿದ್ದಾರೆ. ಆದರೂ ನಾನು ದಂಡ ಪಾವತಿಸಿದ್ದೇನೆ. ಕರೆಂಟ್ ಕಳ್ಳ ಎನ್ನೋದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.