ಏಕೆ ನಿಲ್ಲಿಸಬೇಕು ಟಿಪ್ಪು ಜಯಂತಿಯನ್ನು…?
ಟಿಪ್ಪು ಓಬ್ಬ ಮತಾಂದನಲ್ಲ, ಹಿಂದೂ ವಿರೋಧಿಯೂ ಅಲ್ಲ, ಕನ್ನಡ ದ್ರೋಹಿಯೂ ಆಗಿರಲಿಲ್ಲ. ಅವನೊಬ್ಬ ಅಪ್ಪಟ ಕನ್ನಡ ಪ್ರೇಮಿಯಾಗಿದ್ದ. ಕನ್ನಡಿಗರ ಸಾಮ್ರಾಜ್ಯವನ್ನು ಉತ್ತುಂಗ ಶಿಖರಕ್ಕೆರಿಸಿದ ಮಹಾನ್ ಶೂರನೂ, ರಾಜನೀತಿಜ್ಞನೂ ಹಾಗೂ ಈ ದೇಶ ಕಂಡ ಮಾನವೀಯತೆಯ ಹ್ರುದಯ ಶ್ರೀಮಂತಿಕೆಯ ಮಹಾನ್ ನಾಯಕನಾಗಿದ್ದನೆಂಬುದರಲ್ಲಿ ಎರಡು ಮಾತಿಲ್ಲ.
ಸೀಮಿತ ಭೂಪ್ರದೇಶ ಹೊOದಿದ ಕನ್ನಡಿಗರ ದೇಶವಾಗಿದ್ದ ಮೈಸೂರು ಟಿಪ್ಪು ಸುಲ್ತಾನರ ಕಾಲದಲ್ಲಿ ವಿಸ್ತಾರವಾಗುತ್ತ ಹೋಯಿತು. ದಕ್ಷಿಣದಲ್ಲಿ ಕೊಚ್ಚಿನ್ ವರೆಗೆ, ಉತ್ತರದಲ್ಲಿ ಗೋದಾವರಿವರೆಗೆ ವಿಸ್ತರಣೆಯಾಗುತ್ತ ಹೋದ ಸಾಮ್ರಾಜ್ಯದಲ್ಲಿ ಕಡಪ ಮತ್ತು ಕರ್ನೂಲ್ ಪ್ರದೇಶಗಳೂ ಸಹ ಸೇರಿದ್ದವು. ಕೆಲವೊಂದಿಷ್ಟು ಪ್ರದೇಶಗಳನ್ನು ಹೊರತು ಪಡಿಸಿದರೆ ದಕ್ಷಿಣ ಭಾರತದ ಬಹುಪಾಲು ಪ್ರದೇಶವೆಲ್ಲ (ಕನ್ನಡಿಗರ ) ಟಿಪ್ಪು ಅಧೀನದಲ್ಲಿತ್ತೆಂದು ಕನ್ನಡಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗುತ್ತದೆ.
ಅಂತಹ ಮಹಾನ್ ಶೂರನೂ, ರಾಜನೀತಿಜ್ಞನೂ ಆದ ಟಿಪ್ಪುವಿನ ಆಡಳಿತದಲ್ಲಿ ಹಿಂದೂಗಳಿಗೆ ಯಾವುದೇ ಅಪಾಯವಿರಲಿಲ್ಲ. ಏಕೇಂದರೆ ಸ್ವತಃ ಅವನೇ ಹಿಂದೂ ಸ್ನೇಹಿಯಾಗಿದ್ದನು. ಹೀಗಾಗಿಯೇ ಹೆಚ್ಚಿನ ಮುಸ್ಲಿಮರು ಟಿಪ್ಪುವಿನ ವಿರೋಧಿಗಳಾಗಿದ್ದರು ಮತ್ತು ಔರಂಗಜೇಬನನ್ನು ಪೂಜ್ಯಭಾವನೆಯಿಂದ ಸ್ಮರಿಸುತ್ತಿದ್ದರು. ಆದರೆ ಹಿಂದುಗಳು ಅಂದು ಔರಂಗಜೇಬನನ್ನು ಖಂಡಿಸುತ್ತಿದ್ದರು ಮತ್ತು ಟಿಪ್ಪುವಿನ ಹಿಂದೂ ಸ್ನೇಹವೆOಬ ಕಾರಣಕ್ಕಾಗಿಯೇ ಹುಲಿ, ಶೂರ, ಧೀರ ಎಂದೆಲ್ಲ ಕರೆಯುತ್ತಿದ್ದರು. ಆದರೆ ಅಂದು ಕರೆದವರು ಮುಸ್ಲಿಮ್ ಕಾರಣಕ್ಕಾಗಿಯೇ ಇಂದು ಟಿಪ್ಪುನನ್ನು ಮತಾಂದನೆಂದು ಅರಚುತ್ತಿದ್ದಾರೆ ?! ಬದಲಾದ ಕಾಲಘಟ್ಟದಲ್ಲಿ ಎಲ್ಲವು ತಿರುವುಮುರುವಾದ ಕಾಲಘಟ್ಟವಿದು !!!
ಟಿಪ್ಪು ಸುಲ್ತಾನ್ ಮಡಿದ ನಂತರ ಬ್ರಿಟಿಷರು ತಮ್ಮ ಅಧೀನಕ್ಕೆ ಪಡೆದುಕೊಂಡ ಬಹು ವಿಸ್ತಾರಗೊಂಡಿದ್ದ ಕನ್ನಡ ನಾಡನ್ನು 3ಭಾಗಗಳನ್ನಾಗಿಸಿ ಅದರಲ್ಲಿಂದ ಒಂದು ಭಾಗವನ್ನು ಮಾತ್ರ ಮೈಸೂರು ಅರಸರಿಗೆ ಕೊಡುತ್ತಾರೆ. ಹೀಗಿರುವಾಗ ಟಿಪ್ಪುವಿನ ನಂತರ ಬಹುಪಾಲು ಪ್ರದೇಶ ಕನ್ನಡಿಗರಿಂದ ಕೈಬಿಟ್ಟಿತೆಂದೇ ಹೇಳಬೇಕಾಗುತ್ತದೆ.
ಒಂದು ವೇಳೆ ಟಿಪ್ಪು ಸುಲ್ತಾನ್ ಅವರು ಕೊನೆಯ ಮೈಸೂರು ಯುದ್ದದಲ್ಲಿ ಸಾವನ್ನಪ್ಪದೆ ಇನ್ನಷ್ಟು ಕಾಲ ಬದುಕಿದ್ದಿದ್ದರೆ ಕನ್ನಡಿಗರ ಶಕ್ತಿ ಅಘಾದವಾದುದಾಗಿರುತಿತ್ತು. ಅಂತಹ ಮೇರು ವ್ಯಕ್ತಿತ್ವದ ಟಿಪ್ಪು ಈ ಹಿOದೆ ಆಗಿ ಹೋದ ಮುಸ್ಲಿಮ್ ದೊರೆಗಳಲ್ಲಿಯೇ ಅಪವಾದ ಎಂಬಂತೆ ರಾಜ್ಯಭಾರ ಮಾಡಿದ. ಸರ್ವಧರ್ಮ, ಭಾಷೆ, ಮಹಿಳೆ, ಬುಡಕಟ್ಟು ಹೀಗೆ ಯಾವುದೇ ತಾರತಮ್ಯವಿಲ್ಲದಿರುವ ದೊರೆಗೆ ಧರ್ಮದ ಲೇಪನ ಹಚ್ಚಿ ಅವರ ಜಯಂತಿಗೆ ಅಡೆತಡೆಯನ್ನುಂಟು ಮಾಡುವುದು ಖಂಡನಾರ್ಹ.
ಜಯಂತಿಗೆ ಪ್ರತಿಯೊಬ್ಬರೂ ಬರಬೇಕೆOದು ಖಡ್ಡಾಯವನ್ನಂತು ಮಾಡಿಲ್ಲ.ಹೀಗಿರುವಾಗ ಜಯಂತಿ ಮಾಡುವವರು ಮಾಡಲಿ ಅದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ.ಇದನ್ನು ಏಕೆ ಹೇಳಬೇಕಾಯಿತೆಂದರೆ ಇಂದು ಟಿಪ್ಪು ಜಯಂತಿ ನಿಲ್ಲಿಸಿ ಎಂದು ಹೋರಾಟ ಹಮ್ಮಿಕೊಂಡಿದ್ದರಿOದ ಇಂಥಹ ಸಾಮಾಜೀಕ ಸ್ವಾಸ್ತ್ಯ ಕೆಡಿಸುವವರಿಗೆ ಅರ್ಥವಾಗಲಿ…
ಡಾ.ಗೌತಮ್ ಬನಸೋಡೆ.