ಬಸ್-ಟಾಟಾ ಸುಮೋ ಅಪಘಾತ: ಐವರು ಸಾವು

ಗದಗ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿ ಬಳಿ ಇಂದು ಬೆಳಗ್ಗೆ ನಡೆದ ಅಪಘಾತ ಪ್ರಕರಣದಲ್ಲಿ ಐವರು ಸಾವನ್ನಪ್ಪಿದವರ ಗುರುತನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾದನಹಿಪ್ಪರಗಿ ಮೂಲದ ಈ ಐವರು ಕಲಬುರಗಿಯಿಂದ ಶಿರಹಟ್ಟಿ ಫಕ್ಕೀರೇಶ್ವರ ಮಠಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದವರು ಮಾದನ ಹಿಪ್ಪರಗಿ ಗ್ರಾಮದ ಕತ್ತಿ ಮತ್ತು ಕಲಶೆಟ್ಟಿ ಕುಟುಂಬದ ಸಚಿನ್ ಕತ್ತಿ(31), ಶಿವಕುಮಾರ್ ಕಲಶೆಟ್ಟಿ(51) ಚಂದ್ರಲಕಾ ಕಲಶೆಟ್ಟಿ (42) ರಾಣಿ ಕಲಶೆಟ್ಟಿ (32) ದ್ರಾಕ್ಷಾಯಿಣಿ ಕತ್ತಿ(33) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ದುರಂತದಲ್ಲಿ ಸಾವನ್ನಪ್ಪಿದವರು ಶಿರಹಟ್ಟಿ ಫಕೀರೇಶ್ವರ ದಿಂಗಾಲೇಶ್ವರ ಶ್ರೀಗಳ ಭಕ್ತರು ಎಂದು ತಿಳಿದು ಬಂದಿದೆ. ಅಪಘಾತ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ದಾವಿಸಿದ ಫಕೀರ ದಿಂಗಾಲೇಶ್ವರ ಶ್ರೀಗಳು ಗಾಯಾಳುಗಳಾದ ಅಲ್ಲಮಪ್ರಭು ಕಲಶೆಟ್ಟಿ, ದಿಂಗಾಲೇಶ್ವರ ಕಲಶೆಟ್ಟಿ, ಮಹೇಶ ಕತ್ತಿ, ಅನಿತಾ ಕತ್ತಿ ಎಂಬುವವರ ಆರೋಗ್ಯ ವಿಚಾರಸಿದ್ದಾರೆ.