ಬಾಬಾಸಾಹೇಬರ ಬೆಳಕಿನಲ್ಲಿ ದಲಿತರ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿದೆ.

ಮೊದಲೆಲ್ಲ ದಲಿತರಿಗೆ ಅಂಬೇಡ್ಕರ್ ಅಂತಿಮವಲ್ಲ ಅಂದವರೀಗ ದಲಿತರ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಅಂಬೇಡ್ಕರರತ್ತ ಏಕೆ ನೋಡುತ್ತಿರಿ ಎಂದು ಕೇಳುತ್ತಿದ್ದಾರೆ !?
ಮುಸ್ಲಿಮರು ಕುರಾನ್, ಕ್ರಿಸ್ಚಿಯನರು ಬೈಬಲ್,ಬ್ರಾಹ್ಮಣರು ಭಗವದ್ಗೀತೆಯತ್ತ ನೋಡುವಾಗ ದಲಿತರು ಮಾತ್ರ ಬಾಬಾಸಾಹೇಬರತ್ತ ನೋಡಬಾರದೆಂಬ ಇವರ ಮನಸ್ಥಿತಿ ಹೇಗಿದೆ ನೋಡಿ !
ಮನುವಾದಿ ಬ್ರಾಹ್ಮಣರಿಗೆ,ಆರ್ ಎಸ್ ಎಸ್ ನವರಿಗೆ, ಗೊ ರಕ್ಷಕರಿಗೆ, ರಾಮ ಸೇನೆಯವರಿಗೆ, ಬ್ರಾಹ್ಮಣ -ಬನಿಯಾಸ್ ಸಂಘಟನೆಗಳವರಿಗೆ ಇಂತವರಿಗೆಲ್ಲ ಪ್ರಾಚೀನ ವೇದೋಪನಿಷತ್ತುಗಳು, ರುಷಿಮುನಿಗಳು, ಮನುಸ್ಮೃತಿ, ಭಗವದ್ಗೀತೆಗಳOತವು ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲಿ ಏಕೆ ಬೇಕೆOದು ಕೇಳುವುದಿಲ್ಲ ! ರಾಮಮಂದಿರದ ಪ್ರಸ್ತುತತೆ ಎನು ?ಕೃಷ್ಣ ಹೇಳಿದ ಯೋಗ, ಆಧ್ಯಾತ್ಮ, ಬ್ರಾಹ್ಮಣನು ಪರಮೋಚ್ಚ, ಶೂದ್ರರು ಕೀಳು ಎಂದೆಲ್ಲ ಹೇಳುವ ಭಗವದ್ಗೀತೆ ಇಂದು ವರ್ತಮಾನದಲ್ಲಿ ಬೇಕಾ ಎಂದು ಕೇಳುವುದಿಲ್ಲ. ಇವೆಲ್ಲವುಗಳು ಇಂದಿನ ಆಧುನಿಕ ಯುಗದಲ್ಲಿ ಅಪ್ರಸ್ತುತ ಎಂದು ಹೇಳುವುದಿಲ್ಲ. ಆದರೆ ಬಾಬಾಸಾಹೇಬ್ ಡಾ. ಅಂಬೇಡ್ಕರರ ವಿಷಯದಲ್ಲಿ ಮಾತ್ರ ಅಗತ್ಯಕ್ಕಿಂತ ಹೆಚ್ಚು ಮೂಗುತೂರಿಸಿ ಅಂಬೇಡ್ಕರ್ ಅಂತಿಮವಲ್ಲವೆOದು ಹೇಳಿಬಿಡುತ್ತಾರೆ.

ಅಂತಿಮವಲ್ಲ ಅಂದವರೇ ಇಂದು ವರ್ತಮಾನದ ಸಮಸ್ಯೆಗಳಿಗೆ ಅಂಬೇಡ್ಕರರತ್ತ ಏಕೆ ನೋಡಬೆಕೆಂದು ಕೇಳುತ್ತಾರೆ ! ಇಂತವರು ಆಳವಾದ ಚಿಂತನೆಗಳಿಲ್ಲದ ಎಡಬಿಡಂಗಿ ಜೀವಿಗಳು ! ಇಂತವು ತಮ್ಮಂತೆ ಬೇರೆಯವರೂ ಸಹ ಯೋಚಿಸುವಂತೆ ಮಾಡಿ ಬಾಬಾಸಾಹೇಬ್ ಡಾ. ಅಂಬೇಡ್ಕರರನ್ನು ಜನಮಾನಸದಲ್ಲಿ ನಗಣ್ಯ ಮಾಡುವ ದುಷ್ಟ ಕೀಟಗಳಿವು. ಇವುಗಳಿಗೆ ನಾವು ವ್ಯಕ್ತಿಗತ ಉತ್ತರಿಸದೆ ಉಳಿದೆಲ್ಲ ಸಮುದಾಯಗಳಿಗೆ ಕೇಳಿಸುವOತೆ, ಕಾಣುವOತೆ ಉತ್ತರಿಸಬೇಕು.
ಈ ಭಾರತೀಯ ವ್ಯವಸ್ತೆಯಲ್ಲಿ ಇಂದಿಗೂ ಅದೇ ರಾಮ, ಅದೇ ಕೃಷ್ಣ, ಅದೇ ಅನಾಗರಿಕ ಸಂಪ್ರದಾಯ -ಸಂಸ್ಕೃತಿ (ಜಾತಿ, ಲಿಂಗ, ಧರ್ಮಾದಾರಿತ) ವಿಜ್ರOಬಿಸುತ್ತಿರುವಾಗ ಇವುಗಳಿಗೆಲ್ಲ ಒಂದೇಒಂದು ಮದ್ದು ಅಥವಾ ದಿವ್ಯೌಷಧಿ ಅಂದರೆ ಅದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಎಂಬುದನ್ನು ಸಾರಿಸಾರಿ ಹೇಳಬೇಕಾಗಿದೆ.
ಡಾ.ಗೌತಮ್ ಬನಸೋಡೆ