ಧಾರವಾಡಸುವರ್ಣ ಗಿರಿ ಟೈಮ್ಸ್
‘ಶಕ್ತಿ ಯೋಜನೆ’ ವಿರೋಧಿಸಿ ಆಟೊ ರಿಕ್ಷಾ ಚಾಲಕರಿಂದ ಪ್ರತಿಭಟನೆ.

ಧಾರವಾಡ: ಶಕ್ತಿ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ವಿರೋಧಿಸಿ ಆಟೊ ರಿಕ್ಷಾ ಚಾಲಕರ ಸಂಘದವರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಲಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಶಕ್ತಿ ಯೋಜನೆ ಜಾರಿಗೊಳಿಸಿದಾಗಿನಿಂದ ಮಹಿಳೆಯರು ಆಟೊರಿಕ್ಷಾಗಳಲ್ಲಿ ಓಡಾಡುವುದು ಕಡಿಮೆಯಾಗಿದೆ. ರಿಕ್ಷಾ ಚಾಲಕರ ದುಡಿಮೆಗೆ ಪೆಟ್ಟು ಬಿದ್ದಿದೆ. ಶಕ್ತಿ ಯೋಜನೆ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.