ಉತ್ತರ ಕನ್ನಡಸುವರ್ಣ ಗಿರಿ ಟೈಮ್ಸ್

SRS ಬಸ್ ನಲ್ಲಿ 72 ಲೀಟರ ಗೋವಾ ಮದ್ಯ ಸಾಗಾಟ: ಪೊಲೀಸರು ಚಾಲಕನನ್ನು ವಶಕ್ಕೆ.

ಕಾರವಾರ: ಗೋವಾ ದಿಂದ ಬೆಂಗಳೂರಿಗೆ ತೆರಳುತಿದ್ದ
ಎಸ್.ಆರ್.ಎಸ್ ಬಸ್ ನಲ್ಲಿ ಅಡಗಿಸಿಡಲಾಗಿದ್ದ ಗೋವಾ ಮದ್ಯಮನ್ನು ಕಾರವಾರದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಪೊಲೀಸರು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.

ಗೋವಾದ ವಿವಿಧ ಬ್ರಾಂಡ್ ನ 72 ಲೀಟರ ಗೋವಾ ಮದ್ಯ ಹಾಗೂ ಬಸ್ ನನ್ನು ವಶಕ್ಕೆ ಪಡೆದು ಒಟ್ಟು 25,95000 ಲಕ್ಷ ಮೌಲದ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಾಗಲಕೋಟೆ ಮೂಲದ ಲಿಂಗನಗೌಡ ಪಾಟೀಲ್ (63) ಬಂಧಿತ ವ್ಯಕ್ತಿಯಾಗಿದ್ದು ಗೋವಾ ದಿಂದ ಬೆಂಗಳೂರಿಗೆ ಬಸ್ ಸಂಚರಿಸುವ ವೇಳೆ ಸೀಟ್ ನ ತಳಭಾಗದ ಕ್ಯಾಬಿನ್ ನಲ್ಲಿ 72 ಲೀಟರ್ ಗೋವಾ ಮದ್ಯ ವನ್ನು ಹುದುಗಿಸಿಟ್ಟಿದ್ದರು.

ಖಚಿತ ಮಾಹಿತಿ ಪಡೆದ ಅಬಕಾರಿ ಇನ್ಸಪೆಕ್ಟರ್ ಸದಾಶಿವ್ ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ತಡೆದು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button