ಶಿವಮೊಗ್ಗಸುವರ್ಣ ಗಿರಿ ಟೈಮ್ಸ್

ವಿಧಾನಪರಿಷತ್ ನೈರುತ್ಯ ಕ್ಷೇತ್ರಕ್ಕೆ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ.

ತೀರ್ಥಹಳ್ಳಿ: ಜೂನ್ 2024ರಲ್ಲಿ ನಡೆಯುವ ವಿಧಾನಪರಿಷತ್ ನೈರುತ್ಯ ಕ್ಷೇತ್ರಕ್ಕೆ ಮತದಾರರ ನೋಂದಣಿ ಅಭಿಯಾನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧುಬಂಗಾರಪ್ಪನವರು ಚಾಲನೆ ನೀಡಿದರು.

ತೀರ್ಥಹಳ್ಳಿಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಈ ಸಂದರ್ಭದಲ್ಲಿ ಈ ಕಾರ್ಯ ನೆರವೇರಿಸಿ, ಮತದಾನಕ್ಕೆ ಆರ್ಹರಿರುವ ಎಲ್ಲಾ ಶಿಕ್ಷಕರು, ಉಪನ್ಯಾಸಕರು, ಅಧ್ಯಾಪಕರುಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುವ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಡಾ.ಆರ್. ಎಂ.ಮಂಜುನಾಥಗೌಡ, ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಶಂಕರಘಟ್ಟ ರಮೇಶ್ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಕೋ ಆರ್ಡಿನೇಟರ್ ಜಿ.ಡಿ. ಮಂಜುನಾಥ್, ಸೊರಬದ ಗಣಪತಿ, ಆರ್ಯ ಈಡಿಗರ ಸಂಘದ ಅಧ್ಯಕ್ಷರ ರಾಮಚಂದ್ರ ಮಟ್ಟಿನಮನೆ, ಮುಖಂಡರುಗಳಾದ ಡಾ.ಸುಂದರೇಶ್, ರಾಘವೇಂದ್ರ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಕೇಶ್, ಮುಡುಬ ಮಂಜುನಾಥ್, ಅಸಾದಿ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button