OPS ಹಣ ಕೊಡಿ ಎಂದು ಯಾತ್ರೆ ಆರಂಭಿಸಿದ ಶಿಕ್ಷಕರು: ಗುರಿಕಾರ ನೇತೃತ್ವದಲ್ಲಿ ಭಾರತ ಯಾತ್ರೆ.
ಧಾರವಾಡ: ಶಿಕ್ಷಕ ಸಮುದಾಯದ ಬಹುದಿನಗಳ ಬೇಡಿಕೆಯಾಗಿರುವ OPS ಜಾರಿ ಮತ್ತೆ ಮುನ್ನೆಲೆಗೆ ಬಂದಿದೆ. OPS ಅಡಿ ಕಡಿತಗೊಳಿಸಲಾದ ಸುಮಾರು 18 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ತನ್ನ ಬಳಿ ಇಟ್ಟುಕೊಂಡಿದ್ದು ಅದನ್ನು ರಾಜ್ಯಕ್ಕೆ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ನೇತೃತ್ವದಲ್ಲಿ ಶಿಕ್ಷಕರು ಭಾರತ ಯಾತ್ರೆ ಆರಂಭಿಸಿದ್ದಾರೆ.
ಧಾರವಾಡದ ನೌಕರರ ಭವನದಲ್ಲಿ ಭಾರತ ಯಾತ್ರೆ ಆರಂಭದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರ OPS ಅಡಿ ಕಡಿತಗೊಳಿಸಲಾದ ಶಿಕ್ಷಕರ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡದೇ ತನ್ನ ಬಳಿ ಇಟ್ಟುಕೊಂಡಿದೆ. ಅಲ್ಲದೇ OPS ಜಾರಿ ಮಾಡುವಲ್ಲಿ ಕೆಲ ಕಾಯ್ದೆಗಳನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿ ಈ ಭಾರತ ಯಾತ್ರೆ ನಡೆಯುತ್ತಿದೆ. ಧಾರವಾಡದಿಂದಲೇ ಈ ಯಾತ್ರೆ ಆರಂಭಗೊಂಡಿದೆ.
ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸರಿಯಾಗಿಲ್ಲ. ಇದನ್ನು ರದ್ದುಪಡಿಸಿ NOP ಪುನರಾರಂಭ ಮಾಡಬೇಕು ಎಂಬ ಒತ್ತಾಯವೂ ಶಿಕ್ಷಕರದ್ದಾಗಿದೆ. ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಆಗ್ರಹವಾಗಿದೆ. ಭಾರತದ ನಾಲ್ಕು ಕಡೆಗಳಿಂದ ಈ ಭಾರತ ಯಾತ್ರೆ ಆರಂಭಗೊಂಡಿದ್ದು, ಅಕ್ಟೋಬರ್ 5 ರಂದು ದೆಹಲಿಯಲ್ಲಿ ಎಲ್ಲಾ ಯಾತ್ರೆಗಳು ಸೇರಿ ಬೃಹತ್ ಸಮಾವೇಶ ನಡೆಸಲಿವೆ ಎಂದು ಹೇಳಿದರು.