ಸಾಗುವಾನಿ ತುಂಡರಿಸಿ ಸಾಗಾಣೆ ವೇಳೆ ಅರಣ್ಯ ಇಲಾಖೆ ದಾಳಿ.

ಶಿವಮೊಗ್ಗ: ಸಾಗುವಾನಿ ತುಂಡರಿಸಿ ಸಾಗಾಣಿಕೆ ಮಾಡುವ ವೇಳೆ ಅರಣ್ಯ ಇಲಾಖೆ ಖಡಕ್ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಪತ್ತೆಯಾಗಿದ್ದು ಮೂವರು ತಲೆ ಮರೆಸಿಕೊಂಡಿದ್ದಾರೆ. ತಲೆ ಮರೆಸಿಕೊಂಡ ನಾಟಕಳ್ಳರ ಪತ್ತೆಗೆ ಉನ್ನತ ತಂಡ ರಚಿಸಲಾಗಿದೆ.
ಹಾಯ್ ಹೊಳೆ ಭಾಗದಲ್ಲಿ ಬರುವ ವನ್ಯಜೀವಿ ವಲಯದ ವಲಯ ಅರಣ್ಯಕ್ಕೆ ಸೇರಿರುವ ಜಾಗದಲ್ಲಿ ಸಾಗುವಾನಿ ಮರವನ್ನ ಕೊಯ್ದು ಸಾಗಾಣಿಕೆ ಮಾಡಲು ಯತ್ನಿಸುವಾಗ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ ನೇತೃತ್ವದಲ್ಲಿ ಖಡಕ್ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ 12 ಸಾಗುವಾನಿ ಮರ, ಎರಡು ಮೊಬೈಲ್ ಒಂದು ಮಹೇಂದ್ರ ಬುಲೇರೋ, ಬಜಾಜ್ ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಹಾಯ್ ಹೊಳೆಯ ಭಾರತೀನಗರದ ನಿವಾಸಿ ಶರತ್ ಬಿನ್ ಮಾಯಣ್ಣ, ಮಂಜುನಾಥ್ ಬಿನ್ ದಿ. ಹನುಮಂತಪ್ಪರನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಉಳಿದ ಮೂವರು ಆರೋಪಿಗಳಾದ, ವಿಷ್ಣು ಬಿನ್ ಮುರಳಿ ಹಾಐಹೊಳೆ ವಾಸಿ. ಪಳನಿ ಬಿನ್ ಕಾಶಿ ಭಾರತಿನಗರ ವಾಸಿ. ತಿರುಪತಿ ಬಿನ್ ಕೃಷ್ಣಪ್ಪ ಭಾರತಿನಗರ ವಾಸಿ ಎಂಬುವರು ತಲೆ ಮರೆಸಿಕೊಂಡಿದ್ದು ಅವರನ್ನು ಬಂದಿಸಲು ಉನ್ನತವಾದ ತಂಡ ರಚನೆ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ Dyrfo ಆದಂತಹ ಚನ್ನಬಸಪ್ಪ ಸಣ್ಣಗೌಡ್ರ. ಪ್ರಮೋದ್ ಕುಮಾರ್. ಟಿ ಮಂಜುನಾಥ್. ಪ್ರಸನ್ನಕುಮಾರ್. ಪಲ್ಲವಿ. ಗಸ್ತು ಅರಣ್ಯ ಪಾಲಕರಾದ ಸಲೀಮ್. ಎಂ. ರಮೇಶ್ GN. ಸಂತೋಷ್. ಪ್ರಮೋದ್ ರೆಡ್ಡರ್. ವಾಹನಚಾಲಕ ಸುನಿಲ್. PCP FW ಮಹೇಶ್.ವೃಷಭ. ಶರಣ. ರಾಯುಡ್ ಡಿಸೋಜ. ಹಾಗೂ ಪ್ರಜ್ವಲ್ ಭಾಗಿಯಾಗಿದ್ದಾರು.