ಗೋವಿಂದಪೂರದ ಠಾಣೆಯಲ್ಲಿ ಬೆಳಗಾವಿಯ ಮೂಲದ ಪೊಲೀಸನ ಮೇಲೆ ಪ್ರಕರಣ ದಾಖಲು.
ಬೆಂಗಳೂರು: ಬೆಂಗಳೂರು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಆನಂದ ಪಾಟೀಲ ಎಂಬುವನ ವಿರುದ್ಧ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದ ಪಾಟೀಲ ಕಾರ್ಯದ ನಿಮಿತ್ತವಾಗಿ ಮಹಿಳಾ ಪೇದೆಯೊಂದಿಗೆ ಕರೆ ಮಾಡಿ ಮಾತನಾಡಿದ್ದಾನೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ವಾಟ್ಸಾಪ್ ಮೆಸೇಜ್, ವಿಡಿಯೋ ಕಾಲ್ ಮೂಲಕ ಸಲುಗೆ ಆರಂಭವಾಗಿದೆ. ಬಳಿಕ ಆನಂದ ಪಾಟೀಲ ಮಹಿಳಾ ಪೇದೆಯೊಂದಿಗೆ ಮಾತನಾಡಿ ನಿನ್ನನ್ನು ಪ್ರೀತಿಸುವುದಾಗಿ ತಿಳಿಸಿದ್ದಾನೆ.
ಪೇದೆಯ ಬಣ್ಣದ ಮಾತಿಗೆ ಮರುಳಾದ ಮಹಿಳಾ ಪೇದೆ ಇತನೊಂದಿಗೆ ಎಲ್ಲೆಂದರಲ್ಲಿ ಸುತ್ತಾಡಿದ್ದಾನೆ. ನಂತರ ಮದುವೆಯಾಗುವುದಾಗಿ ಹೇಳಿ ಮಹಿಳಾ ಪೇದೆ ಪಿರ್ಯಾದಿಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ.
ನಂತರ ಮಹಿಳಾ ಪೇದೆ ಮದುವೆ ವಿಷಯವನ್ನು ಪ್ರಸ್ತಾಪಿಸಿದಾಗ ನಾನು ಕೇವಲ ಸ್ನೇಹಿತ ಎಂದು ಭಾವಿಸಿದ್ದೇನೆ. ಪ್ರೀತಿಸುವುದಾಗಿ ಹೇಳಿಲ್ಲ, ನಾನು ಗಂಡಸು ಸಾವಿರ ರುಪಾಯಿ ಹಣ ಕೊಟ್ಟು ಎರಡು ಗಂಟೆ ಅನುಭವಿಸುತ್ತೇನೆ ಎಂದು ಪೋನ್ನಲ್ಲಿ ತಿಳಿಸಿದ್ದಾನೆ. ಇದರಿಂದಾಗಿ ಮನನೊಂದ ಮಹಿಳಾ ಪೇದೆ ಪೊಲೀಸ್ ಪೇದೆ ಆನಂದ ಪಾಟೀಲ ವಿರುದ್ಧ ದಾಖಲಾತಿಗಳ ಸಮೇತ ಗೋವಿಂದಪೂರದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.