ರಾಷ್ಟ್ರೀಯ ನಾಯಕರಿಗೆ ಅವಮಾನ, ಪ್ರಕರಣ ದಾಖಲಿಸಲು ಬೆಳಗಾವಿ ಎಸ್.ಪಿ. ಗೆ ದೂರು.

ಬೆಳಗಾವಿ: ಸ್ವತಂತ್ರ ದಿನಾಚರಣೆಯ ದಿನದಂದು ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡಿದ್ದರೆಂದು ಆರೋಪಿಸಿ ರಾಯಬಾಗ ಪಟ್ಟಣ ಪಂಚಾಯತ ಅಧಿಕಾರಿಗಳ ಮೇಲೆ ದೂರು ದಾಖಲಿಸುವಂತೆ ಬೆಳಗಾವಿ ಎಸ್.ಪಿ.ಗೆ ದೂರು ನೀಡಲಾದೆ.

ಅಗಸ್ಟ್ 15 ರಂದು ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರು ಅಥವಾ ಸ್ವತಂತ್ರ ಹೊರಾಟಗಾರ ಭಾವ ಚಿತ್ರ ಇಟ್ಟು ದ್ವಜಾರೋಹಣ ಮಾಡಬೇಕು. ಆದರೆ, ರಾಯಬಾಗ ಪಟ್ಟಣ ಪಂಚಾಯತಿಯ ಅಧಿಕಾರಿಗಳು ರಾಷ್ಟ್ರೀಯ ನಾಯಕರಿಲ್ಲದೇ ದ್ವಜಾರೋಹಣ ಮಾಡಿದ್ದಾರೆಂದು ಇವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕೆಂದು ಸಾಮಾಜಿಕ ಹೊರಾಟಗಾರ ಮತ್ತು ವಕೀಲ ಸುರೇಂದ್ರ ಉಗಾರೆ ಇವರು ಬೇಳಗಾವಿ ಎಸ್.ಪಿ.ದೂರು ನೀಡಿದ್ದಾರೆ.

ರಾಯಾಬಾಗ ಪಟ್ಟಣ ಪಂಚಾಯತ ಪ್ರಭಾರ್ ಮುಖ್ಯಾಧಿಕಾರಿ ಸುಜಾತ ಸುರಗೊಂಡ, ಕಿರಿಯ ಸಹಾಯಕ ಅಭಿಯಂತರ ಸಿದ್ರಮ ಚೌಗಲಾ. ಪೀರಸಾಬ ಲಬಾಗೆ, ಹುಸ್ಸೇನ್ ಪಟೇಲ್ ಹಾಗೂ ಗಜಾನನ ಕುಲಗುಡೆ ಇವರು ಸರಕಾರದ ನಿಯಮಗಳು ಗೊತ್ತಿದ್ದರೂ ಸರಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಷ್ಟೇ ಅಲ್ಲಾ ಡಾ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿಯವರ ಭಾವ ಚಿತ್ರ ಇಡದೇ ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ ಮತ್ತು ಇವರ ಮೇಲೆ ಅಟ್ರಾಸಿಟಿ ಪ್ರಕರಣ ಹಾಗೂ ಭಾರತೀಯ ದಂಡ ಸಂಹಿತೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಬೆಳಗಾವಿ ಎಸ್.ಪಿ.ಯವರಿಗೆ ದೂರು ನೀಡಿದ್ದಾರೆ.

ಈ ಕುರಿತು ‘ಸುವರ್ಣ ಗಿರಿ ಟೈಮ್ಸ್’ ದ್ವಜಾರೋಹಣ ದಿನವೇ ರಾಷ್ಟ್ರೀಯ ನಾಯಕರ ಭಾವಚಿತ್ರ ಇಡದೇ ಅವಮಾನ ಮಾಡಿದ್ದಾರೆಂದು ಸುದ್ಧಿ ಮಾಡಿ ಗಮನ ಸೆಳೆದಿತ್ತು ಹಾಗೂ ಜಿಲ್ಲಾಡಳಿತ ಕ್ರಮ ತಗೊದೆಕೊಳ್ಳದ್ದರಿಂದ ದೂರನ್ನು ಕೊಡುತ್ತಿರುವದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.