ರಾಜಕೋಟಸುವರ್ಣ ಗಿರಿ ಟೈಮ್ಸ್
ಅಶ್ಲೀಲ ವಿಡಿಯೋದಲ್ಲಿ ಹೆಂಡತಿ ಎಂದು ಭಾವಿಸಿ ಹೆಂಡತಿ ಮತ್ತು ಬಿಡಿಸಲು ಬಂದ ಮಗಳ ಮೇಲೂ ಹಲ್ಲೆ.

ರಾಜಕೋಟ: ಅಶ್ಲೀಲ ವಿಡಿಯೋದಲ್ಲಿ ಹೆಂಡತಿ ಇದ್ದಾಳೆಂದು ಭಾವಿಸಿ ಹೆಂಡತಿಯ ಮೇಲೆ ಹಲ್ಲೆ ಮಾಡಿದ ಘಟನೆ ರಾಜಕೋಟೆದಲ್ಲಿ ನಡೆದಿದೆ.
ಹಲ್ಲೆ ಮಾಡಿದಾತ ಪತಿರಾಯ 51 ವರ್ಷದ ಖಾಸಗಿ ಮಾರುಕಟ್ಟೆಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಅಶ್ಲೀಲ ವಿಡಿಯೋ ನೋಡುವ ಸಮಯದಲ್ಲಿ ಹೆಂಡತಿಯು ವಿಡಿಯೋದಲ್ಲಿ ಕಾಣಿಸಿದ್ದರಿಂದ ಹಲ್ಲೆ ಮಾಡಿದ್ದಾನೆ. ಇದೇ ಸಮಯದಲ್ಲಿ ಮಗಳು ಬಂದಿದ್ದರಿಂದ ಮಗಳು ಮೇಲೂ ಹಲ್ಲೆ ಮಾಡಿದ್ದಾನೆಂದು ಪಿರ್ಯಾದಿಯಲ್ಲಿ ದೂರಿದ್ದಾಳೆ.
45 ವರ್ಷದ ಹೆಂಡತಿಯು, ಗಂಡನು ಅಶ್ಲೀಲ ವಿಡಿಯೋ ಚಟಕ್ಕೆ ಅಂಟಿಕೊಂಡಿದ್ದಾನೆ ಈಗಾಗಲೇ ಒಂದು ಸಲ ಠಾಣೆ ಮೆಟ್ಟೆಲು ಪಂಚರ ಸಮಕ್ಷಮದಲ್ಲಿ ಪಿರ್ಯಾದಿ ಹಿಂದಕ್ಕೆ ಪಡೆದಿದ್ದೆ ಈಗ ಮತ್ತೊಮ್ಮೆ ಹಲ್ಲೆ ಮಾಡಿದ್ದರಿಂದ ಪಿರ್ಯಾದಿ ಕೊಡುತ್ತಿದ್ದೇನೆಂದು ಪಿರ್ಯಾದಿಯಲ್ಲಿ ದೂರಿದ್ದಾಳೆ.
ಪಿರ್ಯಾದಿಯನ್ನು ದಾಖಲಿಸಿಕೊಂಡ ರಾಜಕೋಟ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆಂದು ತಿಳಿದು ಬಂದಿದೆ.