ಬೀದರ್ಸುವರ್ಣ ಗಿರಿ ಟೈಮ್ಸ್

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಮದುವೆಯಾದ ಶಿಕ್ಷಕ: ಅಮಾನತು.

ಭಾಲ್ಕಿ: ಸರ್ಕಾರಿ ಶಾಲೆ ಶಿಕ್ಷಕ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಯನ್ನು ಮದುವೆಯಾದ ಪ್ರಕರಣ ಮೆಹಕರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಈ ಕುರಿತು ಶಿಕ್ಷಕನನ್ನು ಅಮಾನತುಗೊಳಿಸಿ ಡಿಡಿಪಿಐ ಸಲೀಂ ಪಾಶಾ ಸೋಮವಾರ ಆದೇಶಿಸಿದ್ದಾರೆ.

ಶಿಕ್ಷಕನ ಕರ್ತವ್ಯಲೋಪ, ದುರ್ನಡತೆಯಿಂದ ಶಿಕ್ಷಣ ಇಲಾಖೆಗೆ ಮುಜುಗರಕ್ಕೆ ಒಳಗಾಗಿದೆ. ನಾಗರಿಕ ಸೇವಾ ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ ನಿಯಮಾವಳಿ 1957ರ ನಿಯಮಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button