Big breakingಬೆಳಗಾವಿಸುವರ್ಣ ಗಿರಿ ಟೈಮ್ಸ್

ರಾಯಬಾಗ ಪ.ಪಂ ಕರವಸೂಲಿಗಾರನ ಕೈಚಳಕ: 5೦೦ ಕ್ಕೂ ಹೆಚ್ಚು ಅಕ್ರಮ ಖಾತೆ ಸೃಷ್ಟಿ !? ಕಣ್ಮುಚ್ಚಿ ಕುಳಿತ ಬೆಳಗಾವಿ ಜಿಲ್ಲಾಡಳಿತ.

ಬಿಗ್ ಬ್ರೆಕಿಂಗ್

ಬೆಳಗಾವಿ: ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಕರ ವಸೂಲಿಗಾರನ ಕೈಚಳಕದಿಂದ ಸುಮಾರು 5೦೦ ಕ್ಕು ಹೆಚ್ಚು ಅಕ್ರಮ ಖಾತೆಗಳನ್ನು ಸೃಷ್ಟಿಸಲಾಗಿದೆಂದು ಅದಕ್ಕ ಕಾರಣರಾದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸಾಮಾಜಿಕ ಹೊರಾಟಗಾರ ಮತ್ತು ವಕೀಲ ಸುರೇಂದ್ರ ಉಗಾರೆ ಇವರು ಪೌರಾಡಳಿತ ನಿರ್ದೇಶನಾಲಯಕ್ಕೆ ಒತ್ತಾಯ ಮಾಡಿದ್ದಾರೆ.

ರಾಯಬಾಗ ಪಂಚಾಯತಿಯು ಸದಾ ಒಂದಿಲ್ಲೊಂದು ಸುದ್ಧಿಯನ್ನು ಮಾಡುತ್ತಲೇ ಇದೆ. ಅಂತಹದರಲ್ಲಿ ಕರ ವಸೂಲಿಗಾರ ತನ್ನ ಕೈ ಚಳಕದಿಂದ ಅಕ್ರಮವಾಗಿ 5೦೦ ಕ್ಕೂ ಖಾತಾ ಎಂಟ್ರಿ ಮಾಡಿ ಅವರಿಗೆ ಪಹಣಿ ಪತ್ರ ವಿತರಣೆ ಮಾಡಿದ ಘಟನೆ ರಾಯಬಾಗದಲ್ಲಿ ನಡೆದಿದೆ.

ಕರ ವಸೂಲಿಗಾರ ಶಿವರಾಜ್ ಫಕಾಲೆ ಇವರಿಗೆ ಪಹಣಿ ಪತ್ರ ಬರೆಯುವ ಅರ್ಹತೆ ಇರದೇ ಇದ್ದರೂ ಕೂಡಾ ಪಹಣಿ ಪತ್ರವನ್ನು ಬರೆದು ಅವುಗಳಿಗೆ ಮುಖ್ಯಾಧಿಕಾರಿಗಳ ಪರವಾಗಿ ಎಂದು ತಾನೇ ಸಹಿ ಹಾಕಿ ಅಪರಾಧಿಕ ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ಸುರೇಂದ್ರರವರು ದೂರಿದ್ದಾರೆ.

ಇದಕ್ಕೆಲ್ಲಾ ಕಾರಣ ಪ್ರಬಾರ ಮುಖ್ಯಾಧಿಕಾರಿ ಕುಮಾರು ಸುಜಾತಾ ಸುರಗೊಂಡ ಹಾಗೂ ಹೊರಗುತ್ತಿಗೆಯ ನೌಕರ ಪವನಕುಮಾರ ಲಬಾಗೆ ಇಬ್ಬರೂ ಸೇರಿ ಕರ ವಸೂಲಿಗಾರನ ಮೂಲಕ ಅಕ್ರಮ ಮಾಡಿಸಿದ್ದಾರೆಂದು ದೂರಿದ್ದಾರೆ. ಪೌರಾಡಳಿತ ನಿರ್ದೇಶನಾಲವು 2019 ರ ಸಾಲಿನಿಂದ ಕೃಷಿಯೇತರ ಜಮೀನುಗಳಿಗೆ ಪಹಣಿ ವಿತರಣೆಯನ್ನು ರದ್ದು ಮಾಡಿದೆ. ಆದರೆ ರಾಯಬಾಗದ ಪಂಚಾಯತ ಅಧಿಕಾರಿಗಳು ಅಡ್ಡದಾರಿ ಹಿಡಿದು ಕೃಷಿ ಜಮೀನಿಗೆ ಕೆ-ಎಂ-ಎಫ್ 24 ಖುಲ್ಲಾ ಜಾಗಾ ರಜಿಸ್ಟರದಲ್ಲಿ ಅಕ್ರಮವಾಗಿ ಕೃಷಿ ಜಮೀನಿಗೆ ಮಾಲೀಕರ ಹೆಸರಿಗೆ ಖಾತಾ ಸೃಷ್ಟಿ ಮಾಡಿ ಒಂದೇ ವಾರದಲಿ 5೦೦ ಕ್ಕೂ ಹೆಚ್ಚು ಪಹಣಿ ಪತ್ರಗಳನ್ನು ನೀಡಿದ್ದಾರೆ.

ಈ ಅಕ್ರಮಕ್ಕೆ ಕಾರಣರಾದ ಕರವಸೂಲಿಗಾರ ಶಿವರಾಜ್ ಫಕಾಲೇ, ಮುಖ್ಯಾಧಿಕಾರಿ ಕು: ಸುಜಾತಾ ಸುರಗೊಂಡ್ ಹಾಗೂ ಪವನಕುಮಾರ ಲಬಾಗೆ ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗು ಹೊರಗುತ್ತಿಗೆ ನೌಕರ ಲಬಾಗೆ ಇವನನ್ನು ಶಾಸ್ವತವಾಗಿ ವಜಾ ಮಾಡಲು ಗುತ್ತಿಗೆದಾರ ಸಂಸ್ಥೆಗೆ ನೋಟೀಸು ಜಾರಿ ಮಾಡಲು ಒತ್ತಾಯ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button