ಅಥಣೆಯನ್ನು ನೂತನ ಜಿಲ್ಲೆ ಘೋಷಣೆ ಮಾಡಲು ಶಾಸಕ ರಾಜು ಕಾಗೆ ಅವರಿಗೆ ಮನವಿ.

ಬೆಳಗಾವಿ: ಅಥಣಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಕಾಗವಾಡ ಶಾಸಕ ರಾಜು ಕಾಗೆ ಇವರಿಗೆ ಅಥಣಿ ಜಿಲ್ಲಾ ಘೊಷಣೆ ಯಾಗಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕಿರಿ ಎಂದು ಹೋರಾಟ ಸಮಿತಿ ವತಿಯಿಂದ ಕಾಗವಾಡ ತಾಲೂಕಿನ ಉಗಾರದಲ್ಲಿ ಕಾಗವಾಡ ಶಾಸಕರಿಗೆ ಮನವಿ ಸಲ್ಲಿಸಿದರು.
ಇಂದು ಅಥಣಿ ಜಿಲ್ಲಾ ಹೋರಾಟ ಸಮಿತಿವತಿಯಿಂದ ಅಧ್ಯಕ್ಷ ಪ್ರಶಾಂತ್ ತೂಡಕರ್ ಇವರು ನ್ಯಾಯವಾದಿ ಗಳಾದ ಕೆ ಎಲ್ ಕುಂದರಗಿ, ದೇವೇಂದ್ರ ಬಿಸವಾಗರ್ ಹಾಗೂ ಇತರರ ನೇತೃತ್ವದಲ್ಲಿ ಶಾಸಕ ರಾಜು ಕಾಗಿ ಇವರಿಗೆ ಮನವಿ ಸಲ್ಲಿಸಿದರು.
ನ್ಯಾಯವಾದಿಗಳಾದ ಕೆ ಎಲ್ ಕುಂದರಗಿ ಮಾತನಾಡಿ ಕಳೆದ 5 ವರ್ಷಗಳಿಂದ ಅಥಣಿ ತಾಲೂಕಿಗೆ ಜಿಲ್ಲೆಯ ದರ್ಜೆ ನೀಡಿ ಜಿಲ್ಲಾ ಘೋಷಣೆ ಮಾಡಬೇಕೆಂದು ಬೇಡಿಕೆ ಸಲ್ಲಿಸಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆ ವಿಭಜನವಾದರೆ ಚಿಕ್ಕೋಡಿ, ಗೋಕಾಕ್, ಬೈಲಹೊಂಗಲ ಈ ಜಿಲ್ಲೆಗಳು ಘೋಷಣೆ ಆಗಬೇಕು ಎಂದು ಕೇಳುತ್ತಿದ್ದಾರೆ. ಆ ಕಾರಣ ಅಥಣಿ ಮತ್ತು ಕಾಗವಾಡ ಮತ ಕ್ಷೇತ್ರದ ಶಾಸಕರು ಅಥಣಿ ಜಿಲ್ಲೆ ಬೇಡಿಕೆ ಮಂಡಿಸಬೇಕೆಂದು ಕೇಳಿದ್ದಾರೆ.