ಕಿತ್ತೂರು ಉತ್ಸವ: ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೃತ ಕಲಾವಿದನಿಗೆ ಪರಿಹಾರ ಘೋಷಿಸಲು ಒತ್ತಾಯ.

ಬೆಳಗಾವಿ: ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ರಾತ್ರಿ ಏರ್ಪಡಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದ ಕಲಾವಿದನಿಗೆ ಜಿಲ್ಲಾಡಳಿತ ಹತ್ತು ಲಕ್ಷ ರೂ ಪರಿಹಾರ ಘೋಷಿಸಲಿ ಎಂದು ಪರಿಸರವಾದಿ ಮತ್ತು ವಕೀಲ ಸುರೇಂದ್ರ ಉಗಾರೆ ಆಗ್ರಹಿಸಿದ್ದಾರೆ.
ಮೂರು ದಿನಗಳ ಕಾಲ ನಡೆದ ವೀರ ರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ ನಿಮಿತ್ತ ಚೆನ್ನಮ್ಮನ ಕಿತ್ತೂರು ಕೋಟೆ ಆವರಣದ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಜನಾ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಕಿತ್ತೂರು ತಾಲೂಕಿನ ಬಸಾಪುರ ಗ್ರಾಮದ ಈರಪ್ಪ ಫಕೀರಪ್ಪ ಬಬಲಿ (48) ಭಾಗವಹಿಸಿದ್ದರು ನಂತರ ವೇಫ಼ಿಕೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ವೇದಿಕೆಯಲ್ಲಿ ತಮ್ಮ ತಂಡದೊಂದಿಗೆ ಭಾಗಿಯಾಗಿದ್ದ ಈರಪ್ಪ ಬಬಲಿ ಸ್ಪರ್ಧೆ ಮುಗಿಸಿ ವೇದಿಕೆಯಿಂದ ನಿರ್ಗಮಿಸುವಾಗ ತೀವ್ರ ಹೃದಯಘಾತದಿಂದ ಕುಸಿತುಬಿದ್ದಿದ್ದಾರೆ. ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವುಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಿತ್ತೂರ ಉತ್ಸವದ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕರು ಸಾಂಕೇತಿಗವಾಗಿ ಬೆಟ್ಟಿ ನೀಡಿ ಅಗಲಿದ ಕುಟುಂಬದ ಸದಸ್ಯರಿಗೆ ಸಂತ್ವಾನ ಹೇಳಿದ್ದಾರೆ. ಆದರೆ ಪರಿಹಾರ ಘೋಷಣೆ ಮಾಡಿಲ್ಲಾ. ಕಿತ್ತೂರ ಉತ್ಸವಕ್ಕೆ ಇಂತಹ ಕಾರ್ಯಕರ್ತರಿಂದ ಯಶಸ್ವಿ ಸಿಕ್ಕಿದೆ. ಆದರೆ ಬಾಯಿ ಮಾತಿನ ಸಂತ್ವಾನದಿಂದ ಯಾವುದೇ ಲಾಭವಿಲ್ಲಾ ಮೊದಲು ಮೈತನ ಕುಟುಂಬಕ್ಕೆ ಸರಕಾರದವತಿಯಿಂದ ಹತ್ತು ಲಕ್ಷ ಪರಿಹಾರ ಘೋಷಿಸಲಿ ಎಂದು ಪರಿಸರವಾದಿ ಮತ್ತು ವಕೀಲ ಸುರೇಂದ್ರ ಉಗಾರೆ ಬೆಳಗಾವಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.