suvarna giri timesದಾವಣಗೆರೆ

ಯಾವ ಬ್ರಾಹ್ಮಣರು ಒಂದು ರೂಪಾಯಿ ಕೊಟ್ಟು ಹೂವು, ಊದಿನಕಡ್ಡಿ ತರೋದಿಲ್ಲ ಮತ್ತು ಹಚ್ಚೋದಿಲ್ಲ: ಸಚಿವ್ ಕೆ.ಎನ್ ರಾಜಣ್ಣ.

ದಾವಣಗೆರೆ: ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ರಾಜನಹಳ್ಳಿ‌ ವಾಲ್ಮೀಕಿ ಪೀಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರನ್ನೂ ಮೇಲ ವರ್ಗದವರೆಂದು ಕರೆಯಬಾರದು, ಹಾಗೆ ಕರೆದರೆ ನಾವು ಕೆಳವರ್ಗದವರು ಎಂದಾಗುತ್ತದೆ. ನಾವೇನು ಕೆಳವರ್ಗದವರಾ ಎಂಬಿ ತ್ಯಾದಿ ವ್ಯಾಖ್ಯಾನಗಳನ್ನು ಮಾಡಿದ ಅವರು ಈಗಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತಾ ಮೇಲಿನ ಮಾತನ್ನು ಹೇಳಿದರು.

ಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ ನಾವೇ ಶೂದ್ರರೇ ಹೆಚ್ಚು ಹೋಮ, ಹವನ ಮಾಡುತ್ತಿದ್ದೇವೆ. . ಅವರು ಒಂದು ರೂಪಾಯಿ ಖರ್ಚು ಮಾಡಿ ಹೂವು, ಊದುಬತ್ತಿ ತರಲ್ಲ, ಬೇರೆಯವರು ತಂದಿದ್ದರಲ್ಲಿ ಪೂಜೆ ಮಾಡತ್ತಾರೆ, ಹೀಗೆ ಹೇಳಿದರೆ ನಾನು ಬ್ರಾಹ್ಮಣರ ವಿರೋಧಿ ಅಂತ ಅಲ್ಲ, ಇದು ನಾನು ಹೇಳಿದ್ದಲ್ಲ ನನ್ನ ಸ್ನೇಹಿತರು ಹೇಳಿದ್ದು ಎಂದರು.

Related Articles

Leave a Reply

Your email address will not be published. Required fields are marked *

Back to top button