ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ !!

ಕೊಡಗು : ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ 60 ವರ್ಷ ಮೇಲ್ಪಟ್ಟವರು ಮಾಸ್ಕ ಧರಿಸುವುದು ಕಡ್ಡಾಯ ಹೃದಯ ಸಮಸ್ಯೆ ಇರುವವರೆಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಅದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಓಡಾಡದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ.ಸಹಜ ಸ್ಥಿತಿಯಲ್ಲಿ ಇದೆ ಯಾವುದೇ ರೀತಿಯಾದ ನಿರ್ಬಂಧ ವಿಲ್ಲ.ಹೆಚ್ಚು ಪಾಸಿಟಿವ್ ಪ್ರಕರಣಗಳು ಬಂದರೆ ಮಾತ್ರ ನಿರ್ಬಂಧದ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿ ಆ ರೀತಿ ಪರಿಸ್ಥಿತಿ ಇಲ್ಲ ಯಾವುದೇ ರೀತಿಯಾಗಿ ಆತಂಕ ಪಡುವುದು ಬೇಡ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೊರೊನ ರುಪಾಂತರ ತಡೆಯ ಬಗ್ಗೆ ಯಾರೂ ಕೂಡ ಭಯಪಡಬೇಕಿಲ್ಲ. 60 ವರ್ಷ ಮೇಲ್ಪಟ್ಟ ವೃದ್ಧರು ಎಲ್ಲರೂ ತಪಾಸನೆ ಮಾಡಿಕೊಳ್ಳಬೇಕು.ಕರೋನ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ ಧರಿಸಿ. ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಎಂದರು.
ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.ಅಗತ್ಯವಿರುವ ಬೆಡ್ ಪಿಪಿಇ ಕಿಟ್ ಆಕ್ಸಿಜನ್ ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇರಳ ಗಡಿ ಜಿಲ್ಲೆಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸೆಲಾಗಿದೆ ಎಂದು ತಿಳಿಸಿದರು.
ಶೀತ, ಜ್ವರ,ಕೆಮ್ಮು ಇರುವವರು ಕರುನಾಟೆಸ್ಟ್ ಮಾಡಿಸಿಕೊಳ್ಳಬೇಕು ಹೆಚ್ಚು ಪಾಸಿಟಿವ್ ಬಂದರೆ ಅಷ್ಟೇ ನಿಷೇಧ. ಇದು ಅದು ಮಾಡಬಾರದು ಸದ್ಯಕ್ಕೆ ಅಂತಹ ಪರಿಸ್ಥಿತಿಯಿಲ್ಲ.ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಕುಶಾಲನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.