ಮೊಹಮ್ಮದ್ ಶಮಿ ಹುಟ್ಟೂರಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾದ ಯೋಗಿ ಸರ್ಕಾರ.!

ಉತ್ತರ ಪ್ರದೇಶ: ಇಂಡಿಯಾವನ್ನು ವಿಶ್ವಕಪ್ ಸೆಮಿಫೈನಲ್ ಗೆ ತರುವಲ್ಲಿ ಪ್ರಮುಖ ಅಸ್ತ್ರ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಸಾಧನೆಯನ್ನು ಮಾಜಿ ದಿಗ್ಗಜ ಕ್ರಿಕೆಟಿಗರಿಂದ ಹಿಡಿದು, ಪ್ರಧಾನಿ ಮೋದಿವರೆಗೂ ಗಣ್ಯಾತಿಗಣ್ಯರು ಮನಸಾರೆ ಕೊಂಡಾಡಿದ್ದಾರೆ. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಉತ್ತರ ಪ್ರದೇಶದ ಸಹಸ್ಸುರ್ ಅಲಿನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಯೋಗಿ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಸಾಹಸಪುರ್ ಅಲಿನಗರದ ಅಮ್ಮೋಹನಲ್ಲಿ ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಿಸಲು ಅಮ್ಮೋಹದ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.
ಅದ್ರೋಹ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ ಈ ಬಗ್ಗೆ ಮಾತನಾಡಿ, ಮೊಹಮ್ಮದ್ ಶಮಿ ಅವರ ಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಲು ಪ್ರಸ್ತಾವನೆ ಕಳುಹಿಸುತ್ತಿದ್ದೇವೆ. ಪ್ರಸ್ತಾವನೆಯಲ್ಲಿ ಮುಕ್ತ ವ್ಯಾಯಾಮ ಶಾಲೆಯ ನಿರ್ಮಾಣದ ಬಗ್ಗೆಯೂ ಮನವಿ ಮಾಡಲಾಗಿದೆ. ಹಾಗೆಯೇ ಶಮಿ ಅವರ ಗ್ರಾಮದಲ್ಲಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದಷ್ಟು ಭೂಮಿ ಕೂಡ ಇದೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಅದ್ರೋಹ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ, ‘ಯುಪಿ ಸರ್ಕಾರವು ರಾಜ್ಯದಾದ್ಯಂತ 20 ಕ್ರೀಡಾಂಗಣಗಳನ್ನು ನಿರ್ಮಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಅದ್ರೋಹ ಜಿಲ್ಲೆಯ ಮೊಹಮ್ಮದ್ ಶಮಿ ಅವರ ಗ್ರಾಮವನ್ನು ಸಹ ಕ್ರೀಡಾಂಗಣ ನಿರ್ಮಿಸಲು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.