ಜಿ.ಪಂ ಸಿ.ಇ.ಒ ಆದೇಶಕ್ಕೆ ಡೊಂಕ್ ಕೇರ್, ಪಿಡಿಓ ವಿರೂದ್ದ ಪ್ರತಿಭಟಣೆಗೆ ಇಳಿದ ಸವದತ್ತಿ ವೈಧ್ಯಾಧಿಕಾರಿ !?

ಬೆಳಗಾವಿ: ಬೆಳಗಾವಿ ಜಿಪಂ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಆದೇಶವನ್ನು ದಿಕ್ಕರಿಸಿ ಸವದತ್ತಿ ತಾಲೂಕಾ ಪ್ರಾಥಮಿಕ್ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ತಾಲೂಕಿನ ಕೇಂದ್ರಗಳನ್ನು ಪ್ರತಿಬಟಣೆಗೆ ಇಳಿಸಿದ್ದ ಸುದ್ಧಿಯೊಂದು ತಡಮಾಡಿ ಬೆಳಕಿಗೆ ಬಂದಿದೆ.
ಹಿನ್ನಲೆ: ಸವದತ್ತಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇಂಚಲ ಗ್ರಾಮವಿದ್ದು ಅದರಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬರುತ್ತಿದೆ. ಆದರೆ ಇಲ್ಲಿ ಸಿಬ್ಬಂದಿ ಇರದೇ ಇದ್ದರಿಂದ ಇಲ್ಲಿನ ಪಿಡಿಒ ಇವರು ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲಾ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸುರು ಮಾಡಿಸಿ ಎಂದು ವಿನಂತಿಸಿಕೊಂಡಿದ್ದಾರಂತೆ, ಆದರೆ ಇವರ ಮಾತಿಗೆ ಮನ್ನಣೆ ಕೊಡದೇ, ಮಾತಿಗೆ ಮಾತಾಗಿ ಬೆಳೆದು ಹೋಗಿದೆ, ನಂತರ ಈ ವಿಷಯ ಜಿಪಂ ಮುಖ್ಯಾಧಿಕಾರಿಗಳಾದ ರಾಹುಲ್ ಶಿಂಧೆ ಇವರ ಗಮನಕ್ಕೆ ಬಂದಿದೆ. ಇಬ್ಬರನ್ನು ಕರಿಸಿ ಸಂದಾನ ಮಾಡಿ ಮುಗಿಸಲು ರಾತ್ರಿ ಹತ್ತರ ವರಗೂ ಹೋಗಿ ಕೊನೆಗೆ ಸಂಧಾನವಾಗಿದೆ ಎಂದು ಪಂಚಾಯತಿವರು ಹೇಳುತ್ತಾರೆ. ಆದರೆ, ಇದನ್ನೇ ದ್ವೇಷ ಇಟ್ಟುಕೊಂಡು ವೈಧ್ಯಾಧಿಕಾರಿಗಳು ಅಂತರಜಾಲದಲ್ಲಿ ದ್ವೇಷ ಹಂಚುತ್ತಾ ಇಂಚಲ ಪಿಡಿಒ ವಿರುದ್ದ ಹರಿ ಹಾಯುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಒಟ್ಟಾರೆ ಅಧಿಕಾರಿಗಳ ಕಿತ್ತಾಟ ಈಗ ಗ್ರಾಮದಿಂದ ಜಿಲ್ಲೆಗೆ ಸಿಪ್ಟ್ ಆಗಿದೆ ಅನ್ನೊದು ಮಾತ್ರ ಸತ್ಯ.
ಅಷ್ಟೇ ಅಲ್ಲದೇ ಆರೋಗ್ಯ ಕೇಂದ್ರವನ್ನೆ ಬಂದ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಮೇಲಾಧಿಕಾರಿಗಳಿಗೆ ಇದು ಗಮನಕ್ಕೆ ಬಂದಿಲ್ಲಾ ಅನ್ನೋದು ಮಾತ್ರ ಸತ್ಯ. ಅದರಂತೆ ಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂಧಿ ಇಲ್ಲಾ. ಸಿಬ್ಬಂದಿ ಕರೆಸಿ ಆರೋಗ್ಯ ಕೇಂದ್ರವನ್ನು ಸುರು ಮಾಡಿ ಅಂದ್ರೆ ತಪ್ಪಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈ ಕುರಿತು ತಾಲೂಕಿನ ಎಲ್ಲಾ ಪಿಡಿಒಗಳು ಇಂದು ಒಂದಾಗಿ ತಾಲೂಕಿನ ಅಧಿಕಾರಿಗಳಿಗೆ ಮನವಿ ನೀಡಿದ್ದು ತಾಲೂಕಿನ ವೈಧ್ಯಾಧಿಕಾರಿ ಮೇಲೆ ಕ್ರಮತಗೆದುಕೊಳ್ಳಲು ವಿನಂತಿಸಿದ್ದಾರೆ.
ಪಿಡಿಒ ವಿರುದ್ದ ವೈಧ್ಯಾಧಿಕಾರಿ ಮುಷ್ಕರ ಮಾಡಿದರೆ ನಾಳೆ ಪಂಚಾಯತ ಅಧಿಕಾರಿಗಳೂ ಮುಷ್ಕರ ಮಾಡುತ್ತಾರೆ. ಅಧಿಕಾರಿಗಳೇ ಒಬ್ಬರಿಗೊಬ್ಬರು ಮುಷ್ಕರ ಮಾಡುತ್ತಾ ಕುಳಿತರೆ ಆಡಳಿತ ಹೇಗೆ ಮಾಡ್ತಾರೆ ? ಇದಕ್ಕೆ ಜಿಲ್ಲಾಡಳಿತ ಎನು ಹೇಳುತ್ತೆ ? ಉತ್ತರ ಕಾದು ನೋಡಬೇಕು ಅಷ್ಟೇ.