ಜಿಲ್ಲೆಯ BJP ತ್ರಿಮೂರ್ತಿ ಸಂಸದರು ಕೇವಲ ರೈಲ್ವೆ – ವಿಮಾನ ಸೇವೆಗಳಿಗೆ ಸೀಮೀತರಾದ್ರಾ ?

ಬೆಳಗಾವಿ: ರಾಜ್ಯದ ದೊಡ್ಡ ಜಿಲ್ಲೆ ಎಂದು ಪ್ರಸಿದ್ದಿ ಪಡೆದಿದೆ ಅದರಲ್ಲಿ ಆಡಳಿತದ ಮೂವರು ಸಂಸದರನ್ನು ಬೆಳಗಾವಿ ಹೊಂದಿದೆ ಆದರೇ ಆ ಮೂವರು ಸಂಸದರು ಕೇವಲ ರೈಲ್ವೆ ಹಾಗೂ ವಿಮಾನದ ಸೇವೆಗೆ ಸೀಮಿತರಾಗಿದ್ದಾರೆ.
ಜಿಲ್ಲೆಯಲ್ಲಿ ಚಿಕ್ಕೋಡಿ ಸಂಸದ ಅನ್ನಾಸಾಹೇಬ್ ಜೊಲ್ಲೆ ಬೆಳಗಾವಿಯ ಮಂಗಲಾ ಅಂಗಡಿ ಹಾಗೂ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೀಗೆ ಕೇಂದ್ರದ ಆಡಳಿತದ ಮೂರು ಸಂಸದರು ಇದ್ದಾರೆ. ಅವರ ಸಾಧನೆಗಳನ್ನು ಹುಡಕುತ್ತಾ ಹೋದಲ್ಲಿ ಶೂನ್ಯದಲ್ಲಿ ಶತಕ ಮುಟ್ಟುವಂತಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ.

ಚಿಕ್ಕೋಡಿ ಸಂಸದ ಜೊಲ್ಲೆಯವರು ಲೋಕ ಸಭಾ ಕ್ಷೇತ್ರಕ್ಕಿಂತ ಹೆಚ್ಚಾಗಿ ನಿಪ್ಪಾಣಿ ವಿಧಾನಸಭಾ ಬಿಟ್ಟು ಹೊರಗಡೆ ಬಂದಿಲ್ಲಾ ಅದೊಮ್ಮೆ ಬಂದರೂ ಕೇಂದ್ರದ ಯೋಜನೆಗಳ ಹೇಳೋದೆ ಇವರ ಕೆಲಸವಾಗಿದೆ. ಅದನ್ನು ಬಿಟ್ರೆ ಒಂದೆರಡು ಪ್ರಶ್ನೆ ಕೇಳಿ ಪೇಸ್ಭುಕ್ ಟ್ವೀಟರನಲ್ಲಿ ಹಾಗೂ ಪತ್ರಿಕೆಯಲ್ಲಿ ಹಾಕಿ ಪಬ್ಲಿಸಿಟಿ ತಗೊಂಡಿದ್ದೆ ಜಾಸ್ತಿ.
ಇನ್ನೂ ಬೆಳಗಾವಿ ಸಂಸದೆ ಮಂಗಲಾ ಅಂಗಡಿಯವರು, ಅಜಾತ ಶತ್ರು ಸುರೇಶ ಅಂಗಡಿಯ ಮರಣದ ನಂತರ ಖಾಲಿಯಾದ ಸ್ಥಾಳಕ್ಕೆ ಉಪಚುನಾವಣೆಯಲ್ಲಿ ಗೆದ್ದು ಮತ್ತೇ ಬೆಳಗಾವಿಯನ್ನು ಪಕ್ಷದ ಪ್ರತಿನಿಧಿಯಾಗಿ ದೇಹಲಿಗೆ ಹೋದ್ರು. ಆದರೇ ಅವರು ಅಲ್ಲೊಮ್ಮೆ ಇಲ್ಲೊಮ್ಮೆ ಮಂತ್ರಿಗಳನ್ನು ಭೆಟ್ಟಿಯಾಗಿ ಪತ್ರಿಕೆಯಲ್ಲಿ ಹಾಕಿ ಪಬ್ಲಿಸಿಟಿ ತಗೆದುಕೊಂಡದನ್ನು ಬಿಟ್ರಿ ಕೇಲಸ ಮಾತ್ರ ಶೂನ್ಯದಲ್ಲಿ ಶತಕ ಮಾಡಿದಂತೆ ಇದೆ.
ಇನ್ನೂ ಉಳಿದಿದ್ದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಇವರು ಹೊರಾಟದ ಮೂಲಕ ಬಂದವರು ರಾಜ್ಯಸಭೆಗೆ ಹೋದ ಮೇಲೆ ಹೊರಾಟ ಟುಸ್ಸಾಗಿದೆ. ಇವರ ಯೋಜನೆ ತರುವದು ಇರಲಿ ವಿಮಾನಯಾನದ ಸೇವೆ ಹಾಗೂ ರೇಲ್ವೆ ಸೇವೆಯ ಟ್ವೀಟ್ ಬಗ್ಗೆ ಬಿಟ್ರೆ ಶತಕದಲ್ಲಿ ಶೂನ್ಯ ಅನ್ನಬಹುದು. ದೇಹಲಿ ವಿಮಾನಯಾನ ಆರಂಬ ಅಥವಾ ಮೈಸೂರು ಧಾರವಾಡ ರೈಲು ಬೆಳಗಾವಿಯವರೆಗೆ ವಿಸ್ತರಣೆ. ಇದೇ ಇವರ ಸಾಧನೆ ಅಂತಾ ಅನ್ನಬಹುದು.
ಈ ಮೂವರು ತ್ರೀಮೂರ್ತಿ ಸಂಸದರಿದ್ದರೂ ಕೇಂದ್ರದ ಒಂದು ಯೋಜನೆ ಬಂದಿಲ್ಲಾ ಮತ್ತು ಹೊಸ ಯೋಜನೆಗಳನ್ನು ಹಾಗೂ ಹೊಸ ಯೋಜನೆಗೆ ಅನುದಾನವನ್ನು ತರುವಲ್ಲಿ ವಿಫಲರಾಗಿದ್ದರೆ ಅಂದರೆ ತಪ್ಪಾಗಲಾರದು. ಇನ್ನೂ ಚುನಾವಣೆ ಸಮಯದಲ್ಲಿಯೇ ವಿಮಾನ ರೈಲ್ವೆ ತೋರಿಸುತ್ತಿದ್ದಾರೆ ಯೋಜನೆ ಬಗ್ಗೆ ಮಾತನಾಡದೇ ಕೇವಲ ಮೋದಿ ಮೋದಿ ಅನ್ನುತ್ತಿದ್ದಾರೆ. ಇನ್ನೊಂದು ತಿಂಗಳು ಜಿ-20 ಕಾರ್ಯಕ್ರಮದ ಬಗ್ಗೆನೇ ಹೇಳ್ತಾರೆ. ಜಿ- 20 ಯಿಂದ ಎಷ್ಟು ಉಧ್ಯೋಗ್ ಸಿಕ್ತು. ಎಷ್ಟು ಹಣ ಬಂತು ಅನ್ನೋದು ಮಾತ್ರ ಹೇಳಲ್ಲಾ..
ಚಿಕ್ಕೋಡಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿಯವರು ಈ ಮೂವರು ತಾವು BJP & ಮೋದಿಯವರ ಫೋಟೊ ಇಲ್ಲದೇ ಹೋದರೆ ಜನಾ ಇವರನ್ನ ಮಾತನಾಡಿಸಿಲ್ಲಾ. ಮೋದಿವರು ಇದ್ರೆ ಇವರು ಇದ್ದಂಗೆ ಅಂದ್ರೆ ಇವರು BJP ಪಕ್ಷದ ರೊಬೋಟ್ ಇದ್ದಂಗೆ ಅನ್ನುತ್ತಾರೆ. ಜನರ ಸಮಸ್ಯೆಗಳನ್ನು ಅರೀಯಲು ಇ ಮೂವರು ವಿಫಲಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.