ಬೆಂಗಳೂರುಸುವರ್ಣ ಗಿರಿ ಟೈಮ್ಸ್
ವಿಮಾನ ನಿಲ್ದಾಣದ ಶೌಚಾಲಯದಲ್ಲಿ 1.51 ಕೆ.ಜಿ ಪೇಸ್ಟ್ ರೂಪ ಚಿನ್ನ ಪತ್ತೆ.

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಬಳಿ ಇರುವ ಶೌಚಾಲಯದಲ್ಲಿ ಎರಡು ಕಪ್ಪು ಬಣ್ಣದ ಕವರ್ ನಲ್ಲಿ 1.51 ಕೆ.ಜಿ ಚಿನ್ನ ಪತ್ತೆಯಾಗಿದೆ.
ಸೋಮವಾರ ಮಧ್ಯಾಹ್ನ ಕಸ್ಟಮ್ಸ್ ಅಧಿಕಾರಿಗಳಿಗೆ ಶೌಚಾಲಯ ದಲ್ಲಿ ಕಪ್ಪು ಟೇಪ್ ಹಾಕಿರುವ ಕವರ್ ಇರುವ ಬಗ್ಗೆ ಮಾಹಿತಿ ದೊರೆತಿದೆ. ಕವರ್ ಪರಿಶೀಲಿಸಿದಾಗ ಅದರ ಲ್ಲಿ ರುವುದು ಪೇಸ್ಟ್ ರೂಪದಲ್ಲಿರುವ ಚಿನ್ನ ಎಂದು ತಿಳಿಯಿತು.
ಚಿನ್ನ ಯಾರಿಗೆ ಸೇರಿದ್ದು ಎಂಬ ಮಾಹಿತಿ ಇಲ್ಲ. ಪೇಸ್ಟ್ ರೂಪದಲ್ಲಿ ರುವ ಚಿನ್ನ ಕಳ್ಳಸಾಗಣೆಗೆ ಯತ್ನಿಸಿದ ಪ್ರಯಾ ಣಿಕರು ಸಿಕ್ಕಿ ಬೀಳುವ ಭಯದಿಂದ ಶೌಚಾಲಯದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳು ಪೇಸ್ಟ್ ಪ್ರಯೋಗಾಲಯಕ್ಕೆ ಕಳಿಸಿ ಪರಿಶೀಲನೆ ಮಾಡಿಸಿದ್ದಾರೆ. ಚಿನ್ನದ ಮೌಲ್ಯ ₹66.97 ಲಕ್ಷ ಎಂದು ತಿಳಿದು ಬಂದಿದೆ. ತನಿಖೆ ಪ್ರಗತಿಯಲ್ಲಿದೆ.