ತಾಯಿಯನ್ನು ಕೊಂದು, ದೇಹದ ಭಾಗಗಳನ್ನು ತಿಂದ ವ್ಯಕ್ತಿಗೆ ಗಲ್ಲು ಶಿಕ್ಷೆ ವಿದಿಸಿದ ಮುಂಬೈ ಹೈಕೊರ್ಟ.

ಮುಂಬೈ: 2017ರಲ್ಲಿ ತನ್ನ ತಾಯಿಯನ್ನು ಕೊಂದು ದೇಹದ ಕೆಲವು ಭಾಗಗಳನ್ನು ತಿಂದಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಕೊಲ್ಹಾಪುರ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಮುಂಬೈ ಹೈಕೋರ್ಟ್ ಮಂಗಳವಾರ ಆದೇಶ ಮಾಡಿದ್ದು ಅದರ ಜೊತೆಗೆ ಇದು ನರಭಕ್ಷಕ ಪ್ರಕರಣ ಎಂದು ಆದೇಶದಲ್ಲಿ ಹೆಳಿಕೊಂಡಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನ್ಯಾ. ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ಅಪರಾಧಿ ಸುನಿಲ್ ಕುಚ್ಕೊರವಿಯ ಮರಣದಂಡನೆಯನ್ನು ದೃಢೀಕರಿಸುತ್ತಿದೆ ಎಂದು ಹೇಳಿದರು ಮತ್ತು ಅರೋಪಿಯ ಸುಧಾರಣೆಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು. ಇದು ನರಭಕ್ಷಕತೆಯ ಪ್ರಕರಣವಾಗಿತ್ತು ಮತ್ತು ಇದು ಅಪರೂಪದ ವರ್ಗದ ಅಡಿಯಲ್ಲಿ ಬರುತ್ತದೆ.
“ಈ ಪ್ರಕರಣವು ಅಪರೂಪದ ಪ್ರಕರಣಗಳ ಅಡಿಯಲ್ಲಿ ಬರುತ್ತದೆ. ಅಪರಾಧಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದು ಮಾತ್ರವಲ್ಲದೆ, ಆಕೆಯ ದೇಹದ ಭಾಗಗಳಾದ ಮೆದುಳು, ಹೃದಯ, ಯಕೃತ್ತು, ಮೂತ್ರಪಿಂಡ, ಕರುಳುಗಳನ್ನು ತೆಗೆದು ಬೇಯಿಸುತ್ತಿದ್ದಎಂದು ಹೈಕೋರ್ಟ್ ಹೇಳಿದೆ. ಅವನು ಅವಳ ಪಕ್ಕೆಲುಬುಗಳನ್ನು ಬೇಯಿಸಿದ್ದನು ಮತ್ತು ಅವಳ ಹೃದಯವನ್ನು ಬೇಯಿಸಲು ಪ್ರಾರಂಭಿಸಿದನು. ಇದು ನರಭಕ್ಷಕತೆಯ ಪ್ರಕರಣವಾಗಿದೆ ಎಂದೂ ಅಪರಾಧಿಯ ಸುಧಾರಣೆಗೆ ಯಾವುದೇ ಲಕ್ಷಣಗಳು ಕಾಣುವದಿಲ್ಲಾ ಇದೊಂದು ನರಭಕ್ಷಕತೆಯ ಪ್ರವೃತ್ತಿ ಅವನಲ್ಲಿ ಇವೆ ಎಂದು ಉಚ್ಚ ನ್ಯಾಯಾಲಯವು ಗಮನಿಸಿದೆ. ಅದರಂತೆ ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದರೆ, ಜೈಲಿನಲ್ಲಿಯೂ ಇದೇ ರೀತಿಯ ಅಪರಾಧವನ್ನು ಮಾಡಬಹುದು ಎಂದು ಪೀಠ ಹೇಳಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಸುನೀಲ್ ಕುಚಕೋರವಿ ತನ್ನ 63 ವರ್ಷದ ತಾಯಿ ಯಲ್ಲಮ್ಮ ರಾಮ ಕುಚ್ಕೋರವಿಯನ್ನು ಆಗಸ್ಟ್ 28, 2017 ರಂದು ಕೊಲ್ಲಾಪುರ ನಗರದ ಅವರ ನಿವಾಸದಲ್ಲಿ ಕೊಲೆ ಮಾಡಿದ್ದಾನೆ. ಆರೋಪಿಗೆ ಮದ್ಯ ಖರೀದಿಸಲು ಹಣ ನೀಡಲು ತಾಯಿ ನೀಡದೇ ಇದ್ದರಿಂದ ಕೊಲೆಗೆ ಕಾರಣ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.