ವಿಜಯಪುರಸುವರ್ಣ ಗಿರಿ ಟೈಮ್ಸ್

ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ: ಶಾಸಕ ಯತ್ನಾಳ್.

ವಿಜಯಪುರ:ಸಿದ್ಧರಾಮಯ್ಯ ನವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ರಾಜ್ಯದ ಸೂಪರ್ ಸಿಎಂ ಆಗಲಿದ್ದಾರೆ. ದೆಹಲಿಯಲ್ಲಿ ಡಿ.ಕೆ. ಶಿವಕುಮಾ‌ರ ಯಾರ್ಯಾರ ಮನೆಗೆ ತೆರಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯಿದೆ. ಸಿದ್ದರಾಮಯ್ಯರವರನ್ನು ಇಳಿಸುವುದ ಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯ ಮಂತ್ರಿಗಳಿಗೆ ಮಾತ್ರ ಎಲ್ಲಾ ಇಲಾಖೆಗಳ ಸಭೆಯ ನ್ನು ಕರೆಯಲು ಅವಕಾಶವಿರುತ್ತದೆ, ಉಪಮುಖ್ಯಮಂತ್ರಿಗೆ ಆ ಅಧಿಕಾರವಿರು ವುದಿಲ್ಲ. ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಸುಮ್ಮನೆ ಕುಳಿತಿದ್ದಾರಷ್ಟೇ ಅವರದ್ದೇನು ನಡೆಯುವುದಿಲ್ಲ ಎಂದಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರವರಿಗೇ ಹೆಚ್ಚಿನ ಶಾಸಕರ ಬೆಂಬಲವಿದೆ. ಆದರೆ, ಡಿ.ಕೆ. ಶಿವಕುಮಾರ್‌ ಗೆ ಶಾಸಕ ಬೆಂಬಲವಿರುವುದು ಕೇವಲ 15 ಮಾತ್ರ. ಪಕ್ಷದಲ್ಲಿ ಸಿದ್ದರಾಮಯ್ಯ ರವರ ವರ್ಚಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದ ಪಕ್ಷಾಂತರದ ಹೊಸ ಗೇಮ್ ಆಡುತ್ತಿದ್ದಾರೆ. ಇದು ಸಿಎಂ ಪಟ್ಟವೇರಲು ಡಿ.ಕೆ. ಶಿವಕುಮಾರ್ ಪ್ಲಾನ್ ಎಂದು ಪಕ್ಷಾಂತರಕ್ಕೆ ಹೊಸ
ತಿರುವನ್ನು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button