ಸುವರ್ಣ ಗಿರಿ ಟೈಮ್ಸ್ ನ ನ್ಯೂಸ್ ಎಫೆಕ್ಟ್. ರಾಯಬಾಗ ಪಟ್ಟಣ ಪಂಚಾಯತಿಯ ಖಾತಾ ಅಕ್ರಮ ಬಗ್ಗೆ ತನಿಕೆಗೆ ಅದೇಶ ಮಾಡಿದ ಬೆಳಗಾವಿ ಜಿಲ್ಲಾಡಳಿತ.

ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿ ಯಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ಸುವರ್ಣ ಗಿರಿ ಟೈಮ್ಸ್ ಸುದ್ಧಿ ಮಾಡಿತ್ತು ಅದರ ಕುರಿತು ಜಿಲ್ಲಾಡಳಿತ ತನಿಖೆಗೆ ಆದೇಶ ಮಾಡಿದ ಪ್ರತಿ ಲಭ್ಯವಾಗಿದೆ.
ಕಳೆದ ವಾರದ ಹಿಂದೆ ಸುವರ್ಣ ಗಿರಿ ಟೈಮ್ಸ್ ಖಾತಾದಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ಪ್ರಭಾರಿ ಮುಖ್ಯಾಧಿಕಾರಿ ಕು. ಸುಜಾತಾ ಸುರಗೊಂಡ, ಕರ ವಸೂಲಿಗಾರ ಶಿವರಾಜ್ ಫಕಾಲೆ ಹಾಗೂ ಲೋಡರ್ ಪೀರಸಾಬ್ ಲಬಾಗೆ ಇವರು ಕೂಡಿಕೊಂಡು ಅಕ್ರಮವಾಗಿ 500 ಕ್ಕು ಹೆಚ್ಚು ಅಕ್ರಮ ಖಾತಾಗಳನ್ನು ಸೃಷ್ಟಿ ಮಾಡಿದ್ದಾ ರೆಂದು ವರದಿ ಮಾಡಿತ್ತು. ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಇವರು ಅಕ್ರಮದ ಕುರಿತು ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ತನಿಖೆ ಮಾಡಿ ವರದಿ ಸಲ್ಲಿಸಲು ಆದೇಶ ಮಾಡಿದ್ದಾರೆ.

ಈ ತನಿಖೆ ಕುರಿತು ಮಾತನಾಡಿದ ಸಾಮಾಜಿಕ ಹೋರಾಟಗಾರ ಸುರೇಂದ್ರ ಉಗಾರೆ ಇವರು ಈಗಾಗಲೇ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳ ಹತ್ತಿರ ರಾಯಬಾಗದ ಪಟ್ಟಣ ಪಂಚಾಯತಿಗೆ ಸಂಬಂದಿಸಿದಂತೆ ಮೂರ್ನಾಲ್ಕು ತನಿಖಾ ಆದೇಶಗಳನ್ನು ಇಟ್ಟುಕೊಂಡಿ ದ್ದಾರೆ. ಅದರಲ್ಲಿ ಇದೂ ಒಂದು ಎನ್ನುತ್ತಾರೆ. ಅರ್ಜಿ ದಾರರು ಮಾನ್ಯ ಲೊಕಾಯುಕ್ತಕ್ಕೆ ದೂರು ಕೊಡಬಾರ ದೆಂದು ಇದನ್ನು ತಡೆಯಲು ಜಿಲ್ಲಾಡಳಿತ ಕೇವಲ ಒಂದು ತನಿಖಾ ತಂಡವನ್ನು ಕಾಟಾಚಾರಕ್ಕಾಗಿ ಆದೇಶ ಮಾಡಿ ಕೈತೊಳೆದು ಕೊಳ್ಳುತ್ತದೆ ಅಷ್ಟೇ. ಇದರಲ್ಲಿ ಹೊಸದು ಎನೂ ಇಲ್ಲಾ ಅನ್ನುತ್ತಾರೆ.
ಆದರೆ ಬೆಳಗಾವಿ ಜಿಲ್ಲಾಡಳಿತ ರಾಯಬಾಗ ಪಟ್ಟಣ ಪಂಚಾಯತಿಯ ಅಕ್ರಮಖೋರರ ಮೇಲೆ ಖಡಕ್ ಆದೇಶ ಮಾಡುತ್ತಾ ಅನ್ನೊದು ಕಾದು ನೋಡಬೇಕು.
