ಚಾಮರಾಜನಗರಸುವರ್ಣ ಗಿರಿ ಟೈಮ್ಸ್

ಸಾಂಬಾರ್ ಜಿಂಕೆಯನ್ನು ಅಟ್ಟಾಡಿಸಿಕೊಂಡು ಬೇಟೆಯಾಡಿ ಸಿಗಿದು ತಿಂದ ಸೀಳು ನಾಯಿಗಳು !

ಚಾಮರಾಜನಗರ: ಸಾಂಬಾರ್ ಜಿಂಕೆಯೊಂದನ್ನು ಸೀಳುನಾಯಿಗಳು ಬೇಟೆಯಾಡಿ ಕಿತ್ತು ತಿನ್ನುತ್ತಿದ್ದ ಘಟನೆಯನ್ನು ಪ್ರವಾಸಿಗರು ಕಣ್ತುಂಬಿಕೊಂಡ ಘಟನೆ ಜನಪ್ರಿಯ ಸಫಾರಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ತಾಲೂಕಿನ‌ ಕೆ.ಗುಡಿಯಲ್ಲಿ ನಡೆದಿದೆ.ಕೆ.ಗುಡಿಯಲ್ಲಿ ಸೋಮವಾರ ಬೆಳಗಿನ ಸಫಾರಿಯಲ್ಲಿ ಈ ಘಟನೆ ನಡೆದಿದ್ದು, ಕೆರೆ ಬಳಿ ಸಾಂಬಾರ್ ಜಿಂಕೆಯನ್ನು ಸೀಳುನಾಯಿಗಳ ಗುಂಪು ಬೇಟೆಯಾಡಿ ತಿನ್ನುತ್ತಿದ್ದರೇ ಮತ್ತೊಂದು ಕಡೆ ಸೀಳುನಾಯಿಗಳ ಮರಿಗಳು ಚಿನ್ನಾಟದಲ್ಲಿ ತೊಡಗಿವೆ.

ಸದ್ಯ, ಈ ವೀಡಿಯೋವನ್ನು ಸಂತೋಷ್ ಸುಬ್ರಹ್ಮಣ್ಯಂ‌ ಎಂಬವರು ಅಪ್‌ಲೋಡ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಇನ್ನು ನೆಟ್ಟಿಗರು ಈ ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button