ಬೆಳಗಾವಿಸುವರ್ಣ ಗಿರಿ ಟೈಮ್ಸ್

ರಾಯಬಾಗ ಪಟ್ಟಣ ಪಂಚಾಯತ: ಸ್ವತಂತ್ರ ಅಭ್ಯರ್ಥಿಗಳೇ ಅಧ್ಯಕ್ಷ ಉಪಾಧ್ಯಕ್ಷ.

ರಾಯಬಾಗ: ಬಹುದಿನಗಳ ನಂತರ ರಾಯಬಾಗ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಅಂತಿಮವಾಗಿದ್ದು ಪ್ರತಿಸ್ಪರ್ಧಿ ಇಲ್ಲದ್ದರಿಂದ ಸ್ವತಂತ್ರ ಅಭ್ಯರ್ಥಿಗಳಾದವರೇ ಅದ್ಯಕ್ಷ ಉಪಾಧ್ಯಕ್ಷರಾಗಿದ್ದಾರೆ.

ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಅಶೋಕ ಅಂಗಡಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಜಾಧವ ಆಯ್ಕೆ ಆಗಿದ್ದಾರೆಂದು ಚುನಾವಣಾ ಅಧಿಕಾರಿಗಳಾದ ತಹಶಿಲ್ದಾರರು ಅಧ್ಯಕ್ಷ & ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆಂದು ತಿಳಿದು ಬಂದಿದೆ‌.

೨೦೧೮ ರಲ್ಲಿ ಚುನಾವಣಾ ನಡಿದಿತ್ತು. ಅಂದು ಕಾಂಗ್ರೆಸ್ ನಾಯಕರಾದ ವಿವೇಕರಾವ ಪಾಟೀಲ ಬಣ ಹಾಗೂ ಸ್ಥಳೀಯ ಬಣ (ಬಿಜೆಪಿ) ರ ನಡುವೆ ಚುನಾವಣೆ ನಡೆದಿತ್ತು. ಬಿ.ಜಿ.ಪಿ ಶಾಸಕ ಐಹೋಳೆ ಪಕ್ಷದ ಸಂಕೇತ್ ಬಿಟ್ಟು ‘ರಿಕ್ಷಾ’ಗೆ ಮೋರೆ ಹೋಗಿ ಚುನಾವಣೆ ಎದುರಿಸಲು ನಿರ್ದಾರ ಮಾಡಿದ್ದರು. ಕೊನೆಗೆ ಕಾಂಗ್ರೆಸ್ಸ್ ಪಕ್ಷ ಪಂಚಾಯತಿಯ ಅಧಿಕಾರ ಪಡೆದುಕೊಂಡಿತ್ತು.

ಕೈ ಪಕ್ಷಕ್ಕೆ ಅಧಿಕಾರ ಹಿಡಿಯುವ ಬಲ ಇದ್ದರೂ ಈಗ ಸ್ವತಂತ್ರ ಅಭ್ಯರ್ಥಿ ಅಶೋಕ ಅಂಗಡಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಜಾಧವ ಆಯ್ಕೆ ಆಗಿ ಎಲ್ಲರ ಗಮನ ಸೇಳೆದಿದ್ದಾರೆ.

ಒಟ್ಟಾರೆ ಕಾಂಗ್ರೆಸ್ಸ್ ಪಕ್ಷ ಅಧಿಕಾರ ಮಾಡುವ ಬಲ ಇದ್ದರೂ ಸ್ವತಂತ್ರ ಅಭ್ಯರ್ಥಿಗೆ ಮಣೆ ಹಾಕಿದಂತಾಗಿದೆ. ಇದು ಜಿಜ್ಞಾಸೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಸಧ್ಯ ಜಿಲ್ಲಾ ರಾಜಕಾರಣಿಗಳು ರಾಯಬಾಗದ ಪಟ್ಟಣ ಪಂಚಾಯತಿಯ ಕಡೆಗೆ ನೊಡುತ್ತಿರುವ ಸಮಯದಲ್ಲಿ ಈ ಅಧ್ಯಕ್ಷ & ಉಪಾಧ್ಯಕ್ಷ ಕಳಕೊಂಡಿದ್ದರಿಂದ ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ. ಹೀಗಾಗಿ ಇದು ಮಾಸ್ಟರ್ ಮೈಂಡ್ ಖ್ಯಾತಿಯ ಉಸ್ತುವಾರಿ ಮಂತ್ರಿ ಜಾರಕಿಹೋಳಿಯವರಿಗೂ ಮುಜುಗರವಾಗುವಂತಾಗಿದೆ.

ಅದರಜೊತೆ ಜೊತೆಗೆಯೇ ಬಹು ವರ್ಷಗಳಿಂದ ಅಧಿಕಾರದ ಆಸೆಯನ್ನು ಇಟ್ಟುಕೊಂಡು ಕುತಿದ್ದ ಐಹೋಳೆ ಬಣ ಉಪಾಧ್ಯಕ್ಷ ತಗೆದುಕೊಂಡು ಕುಲ -ಕುಲ ನಗುತ್ತಿದ್ದಾರೆ. ಅದರಂತೆಯೇ ಇನ್ನೊಂದು ಕಡೆಗೆ ದಲೀತ್- ಮುಸ್ಲಿಂ ಸದಸ್ಯರು ನಾವೇ ಅಧ್ಯಕ್ಷ ಉಪಾಧ್ಯಕ್ಷ ಎಂದು ಕೂತಿದ್ದಾಗ ಈ ಚುನಾವಣೆ ಮುಖ ಕೇಳಗೆ ಮಾಡಿ ನಿಲ್ಲುವಂತೆ ಮಾಡಿದೆ.

ಒಟ್ಟಾರೆ, ರಾಯಬಾಗದ ಧುರೀಣ ವಿವೇಕರಾವ ಪಾಟೀಲರವರು ಕೈ ಪಡೆಗೆ ಅಧಿಕಾರ ಬಲ ಇದ್ದರೂ ಅಧಿಕಾರ ಕೊಡದೇ ಕೊನೆಗೆ ಗೇಮ್ ಪ್ಲ್ಯಾನ್ ಚೆಂಜ್ ಮಾಡಿ ಕೈ ಪಡೆಗೆ ಮತ್ತು ಜಾರಕಿಹೋಳಿ ಬಣಕ್ಕೆ ಟಾಂಗ್ ಕೊಂಡು ಐಹೋಳೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ತಾಲೂಕಿನಲ್ಲಿ ಜನತಾ ಸಂಘ ಮತ್ತು ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.

ಆದರೆ ಹಗರಣಗಳನ್ನೇ ಹೊತ್ತುಕೊಂಡು ನಿಂತಿರುವ ಪಟ್ಟಣ ಪಂಚಾಯತಿಯ ಹಣೆ ಬರಹ ಮುಂದೆ ಏನು ಕಾದಿದೆ, ಅನ್ನೋದು ಕಾದು ನೋಡಬೇಕು ?

Related Articles

Leave a Reply

Your email address will not be published. Required fields are marked *

Back to top button