ಯಾದಗಿರಿಸುವರ್ಣ ಗಿರಿ ಟೈಮ್ಸ್
೬೫ ವರ್ಷಗಳ ಪಹಣಿ ಸಮಸ್ಯೆ: ತೆಲಂಗಾಣಗೆ ಸೇರಿಸಲು ಯಾದಗಿರಿ ಹಳ್ಳಿಗಳ ಒತ್ತಾಯ.

ಯಾದಗಿರಿ: ಜಮೀನುಗಳ ಪಹಣಿ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದ್ದರಿಂದ ತೆಲಂಗಣಾ ರಾಜ್ಯದಲ್ಲಿ ಸೇರಿಸಲು ಯಾದಗಿರಿಯ ಹಳ್ಳಿಗಳ ಜನರು ಒತ್ತಾಯ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಾಪೂರ ಮತ್ತು ಗೋನಾಳ ಗ್ರಾಮದ ಜನರ ಜಮೀನುಗಳ ಸಮಸ್ಯೆ ೬೫ ವರ್ಷಗಳಿಂದ ಸುಮಾರು ೮೫೦ ರೈತರ ೧೦.೦೦೦ ಎಕರೆ ಜಮೀನುಗಳ ಪಹಣಿ ಸಮಸ್ಯೆ ಬಗೆಹರಿದಿಲ್ಲಾ ಹೀಗಾಗಿ ಪಕ್ಕದಲ್ಲಿ ತೆಲಂಗಣಾ ರಾಜ್ಯ ಇದೆ ಅಲ್ಲಿಗೆ ವರ್ಗಾಯಿಸಿ ಎಂದು ಯಾದಗಿರಿ ಜಿಲ್ಲಾಧಿಕಾರಿಗಳಾದ ಸುಶೀಲಾ ಇವರಿಗೆ ವಿನಂತಿಸಿಕೊಂಡಿದ್ದಾರೆ.
ಅದರ ಜೊತೆ ಯಾದಗಿರಿ ಉಪವಿಗಾಧಿಕಾರಿಗಳನ್ನು ಎತ್ತಂಗಡಿ ಮಾಡಲು ಒತ್ತಾಯಿಸಿದ್ದಾರೆ. ಒಂದೊಮ್ಮೆ ಜಿಲ್ಲಾಡಳಿತ ತಮ್ಮ ಸಮಸ್ಯೆ ಬೇಗ ಬಗೆಹರಿಸಲು ವಿಫಲವಾದಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುವದಾಗಿ ಅರ್ಜಿಯಲ್ಲಿ ಉಲ್ಲೇಖಿಸಿ ಮನವಿ ಮಾಡಿದ್ದಾರೆ.