ಮುಂಬೈಸುವರ್ಣ ಗಿರಿ ಟೈಮ್ಸ್
ಬೀಗ ಹಾಕಿದ ಮನೆಯಲ್ಲಿ ಮೂರು ಕೊಳೆತ ದೇಹಗಳು !!

ಮುಂಬೈ: ಮುಂಬೈನ ವಸಾಯಿ ಬಳಿ ಬೀಗ ಹಾಕಿರುವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮೂವರ ಮೃತ ದೇಹಗಳು ಪತ್ತೆಯಾಗಿವೆ. ಮೃತಪಟ್ಟವರು ವಸಾಯಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಮೋ ಅಜಮ್, ರಾಜು ಮತ್ತು ಛೋಟ್ಕು ಎಂದು ಗುರುತಿಸಲಾಗಿದೆ.
ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಬೀಗ ಹಾಕಿದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಈ ಮೂವರ ಸಾವಿಗೆ ಆಮ್ಲಜನಕ ಕೊರತೆಯಾಗಿರಬೇಕು ಅಥವಾ ಯಾರಾದರೂ ವಿಷಕಾರಕ ಅನಿಲವನ್ನು ಬಿಟ್ಟಿರಬಹುದು ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.