ಧಾರವಾಡಸುವರ್ಣ ಗಿರಿ ಟೈಮ್ಸ್
ಯುವಕನನ್ನ ಕತ್ತು ಕೊಯ್ದು ಭೀಕರವಾಗಿ ಹತ್ಯೆ.

ಹುಬ್ಬಳ್ಳಿ: ಸುಮಾರು ಮೂವತ್ತೇರಡು ವರ್ಷದ ಯುವಕನನ್ನ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಹುಬ್ಬಳ್ಳಿಯ ಶಿವಳ್ಳಿ ರಸ್ತೆಯ ಹೊಲದಲ್ಲಿ ಸಂಭವಿಸಿದೆ.
ಯುವಕನ ಕುತ್ತಿಗೆಯ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದಿರುವ ಗುರುತು ಕಂಡು ಬರುತ್ತಿದೆ. ಇದರಿಂದಲೇ ತೀವ್ರವಾದ ರಕ್ತಸ್ರಾವವಾಗಿ ಸಾವು ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಕೊಲೆಯಾದವನ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಹಬ್ಬದ ದಿನವೇ ನಡೆದಿರುವ ಘಟನೆ ಜನರನ್ನ ಬೆಚ್ಚಿಬೀಳಿಸಿದೆ.