ಅಯ್ಯನ್ ಕಾಳಿ (ಭಾಗ 3)

1937 ರ ಇಸವಿ. ಗಾಂಧಿಜಿ ಕೇರಳಕ್ಕೆ ಬಂದಿದ್ದರು. ಕೇವಲ ಅಸ್ಪೃಶ್ಯರಿಗಾಗಿ ಅಷ್ಟೇ ಅಲ್ಲ, ಕೆಳವರ್ಗದ ಎಲ್ಲಾ ಜನರಿಗಾಗಿ ಹೋರಾಡುತ್ತಿರುವ ಅಯ್ಯನ್ ಕಾಳಿ ಬಗ್ಗೆ ತಿಳಿದುಕೊOಡು ಕಾಳಿಯನ್ನು ಬೆಟ್ಟಿಯಾಗುವ ಇಂಗಿತ ವ್ಯಕ್ತಪಡಿಸಿ ಬೆಟ್ಟಿಗಾಗಿ ಕಾಳಿ ಇದ್ದಲ್ಲಿಗೆ ಹೊರಟೇಬಿಟ್ಟರು.

ಗಾಂಧಿಜಿ ವೆOಗಾನೂರಿನಲ್ಲಿರುವ ತನ್ನನ್ನು ಬೆಟ್ಟಿಯಾಗಲು ಬರುತ್ತಿದ್ದಾರೆಂಬ ಸುದ್ದಿ ತಿಳಿದ ಅಯ್ಯನ್ ಕಾಳಿ ತಕ್ಷಣಕ್ಕೆ ಸುಮಾರು ಹತ್ತು ಸಾವಿರದಷ್ಟು ಜನರನ್ನು ಸೇರಿಸಿ ಗಾಂಧಿಯನ್ನು ಸ್ವಾಗತಿಸಲು ಸಿದ್ದನಾಗಿ ನಿಂತ.
ವೆಂಗಾನೂರಿಗೆ ಬಂದ ಗಾಂಧಿ ಜನಸ್ತೋಮದ ಮಧ್ಯೆ ನಿಂತಿದ್ದ ಕಾಳಿಯತ್ತ ಹೋಗಿ ಕಾಳಿಯನ್ನು ಬಿಗಿದಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು. ಜನರ ಜಯಘೋಷಗಳ ಮಧ್ಯೆ ಅಯ್ಯನ್ ಕಾಳಿ ಸ್ಥಾಪಿಸಿದ್ದ ಶಾಲೆಯ ಆವರಣದಲ್ಲಿಯೇ ನಿರ್ಮಿಸಿದ್ದ ವೇದಿಕೆಯ ಮೇಲೆ ಗಾಂಧಿ- ಕಾಳಿ ಆಸೀನರಾದರು.
ಗಾಂಧಿ, ಕಾಳಿಯ ಅದ್ವಿತೀಯ ಸಾಧನೆಗಳ ಬಗ್ಗೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿ ಕಾಳಿ ಸ್ಥಾಪಿಸಿದ್ದ ಶಾಲೆ ಮತ್ತು ಗ್ರಂಥಾಲಯಗಳಿಗೆ ಬೆಟ್ಟಿಕೊಟ್ಟು ಇನ್ನೇನು ಹೊರಡಲನಿಯಾಗಿದ್ದರು, ಆಗ ಗಾಂಧಿಯನ್ನು ಬೀಳ್ಕೊಡಲು ನಿಂತಿದ್ದ ಯುವಕರ ಗುಂಪಿನಿಂದ ಪ್ರಶ್ನೆಯೊಂದು ತೂರಿಬಂದು ಗಾಂಧಿಯ ಕಿವಿಗಳಿಗೆ ಅಪ್ಪಳಿಸಿತು !
ಅದು ; “ದೇಶಕ್ಕೆ ಪೂರ್ಣ ಸ್ವತಂತ್ರ್ಯ ಸಿಕ್ಕರೆ ನಮಗೇನು ಲಾಭ ? ನಮಗೇನು ಕೊಡುತ್ತೀರಿ ?” ಎಂಬುದಾಗಿತ್ತು.
ಈ ಪ್ರಶ್ನೆಯನ್ನು ಸಿಡಿಲಿನಂತೆ ಎಸೆದ ಯುವಕನ ಹೆಸರು ಕೆ.ಆರ್. ವೇಲಾಯುಧನ್ ಆಗಿತ್ತು. ಆ ದೃಡವಾಗಿ ನಿಂತು ಪ್ರಶ್ನೆ ಕೇಳಿದ್ದ ಯುವಕನನ್ನೇ ನೋಡುತ್ತ ಗಾಂಧಿ ತಟ್ಟನೆ” ಸ್ವತಂತ್ರ ಭಾರತದ ಮೊದಲ ಅಧ್ಯಕ್ಷನನ್ನಾಗಿ ನಿಮ್ಮ ಹೊಲೆಯವರನ್ನೊಬ್ಬನನ್ನು ಮಾಡಿತ್ತೇನೆಂದು” ಹೇಳಿ ನಸುನಕ್ಕು ಅಲ್ಲಿಂದ ಹೊರಡುತ್ತಾರೆ.

ಎಂತಾ ಸೋಜಿಗದ ವಿಷಯವೆOದರೆ, ಸ್ವತಂತ್ರ ಭಾರತದ ಪ್ರಥಮ ದಲಿತ ರಾಷ್ಟ್ರಪತಿಯಾಗಿದ್ದ ಶ್ರೀ ಕೆ ಆರ್ ನಾರಾಯಣನ್ ಅಂದು ಗಾಂಧಿಗೆ ಪ್ರಶ್ನೆ ಕೇಳಿದ್ದ ಕೆ ಆರ್ ವೇಲಾಯುಧನನ ಕಿರಿಯ ಸಹೋದರ !
ಡಾ.ಗೌತಮ್ ಬನಸೋಡೆ.