ಚಾಮರಾಜನಗರಸುವರ್ಣ ಗಿರಿ ಟೈಮ್ಸ್
ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಆತ್ಮಹತ್ಯೆ

ಗುಂಡ್ಲುಪೇಟೆ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಯುವಕನೊಬ್ಬ ಪ್ರೀತಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಿ.ಐಶ್ವರ್ಯ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ತಾಲೂಕಿನ ಯಡವನಹಳ್ಳಿಯ ಯುವಕ ಶ್ರೀನಿವಾಸ್, ಬಿಳಿಗಿರಿನಾಯಕ, ನಾಗಮ್ಮ (ಯವಕನ ತಂದೆ, ತಾಯಿ) ಸಾವಿಗೆ ಕಾರಣ ಎಂದು ಐಶ್ವರ್ಯಳ ತಾಯಿ ಪ್ರೇಮ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯುವಕ ಪೀಡಿಸುತ್ತಿರುವ ಬಗ್ಗೆ ಆತನ ಪೋಷಕರಿಗೆ ತಿಳಿಸಿದರೂ ಅವರು ತಡೆಯಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.