ಕುಡಚಿ ಕ್ಷೇತ್ರದ ಹಾರೂಗೇರಿ ಗ್ರಾಮದ ಜಮೀನುಗಳಲ್ಲಿ ರೈತರ ಅನುಮತಿ ಇಲ್ಲದೇ ನಡೆಯುತ್ತಿರುವ ಹೆಸ್ಕಾಂ ಲೈನ್ ಕಾಮಗಾರಿ !?

ಬಿಗ್ ಬ್ರೆಕಿಂಗ್ಸ್
ರಾಯಬಾಗ: ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರದ ಹಾರೂಗೇರಿ ಗ್ರಾಮದ ಜಮೀನುಗಳಲ್ಲಿ ರೈತರ ಅನುಮತಿ ಇಲ್ಲದೇ ಹೆಸ್ಕಾಮ್ ಅಧಿಕಾರಿಗಳು ಎಗ್ಗಿಲ್ಲದೇ ರೈತರನ್ನು ಹೆದರಿಸಿ ಕಾಮಗಾರಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಅಳಗವಾಡಿ ಗ್ರಾಮದಲ್ಲಿ 110 ಕೆ.ವಿ ಕಾಮಗಾರಿ ನಡೆಯುತ್ತಿದ್ದು ಅದು ತೆರದಾಳದಿಂದ ಹಾರೂಗೇರಿ ಮಾರ್ಗವಾಗಿ ಅಳಗವಾಡಿ ಗ್ರಾಮಕ್ಕೆ ಮುಟ್ಟುತ್ತದೆ. ಅದರಲ್ಲಿ ಸುಮಾರು 36 ಕ್ಕೂ ಹೆಚ್ಚು ಮೆನ್ ಲೈನ ಕಂಬಗಳನ್ನು ಕೂಡ್ರಿಸುವ ಯೋಜನೆ ಇದಾಗಿದೆ. ಆದರೆ ಅಭಿಯಂತರರು ಹಾಗು ಗುತ್ತಿಗೆದಾರರು ರೈತರ ಅನುಮತಿಯನ್ನು ಪಡೆಯದೇ ನೇರವಾಗಿ ಲೈನ ಕಂಬಗಳನ್ನು ನಿಲ್ಲಿಸುತ್ತಿದ್ದಾರೆ. ಕೆಲವೊಬ್ಬರಿಗೆ ಹೆದರಿಸಿ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಮುಗ್ದ ರೈತರಿಗೆ ಸಾಧಾರಣ ಹಣ ಸಹಿ ಪಡೆದು ಲೈನ್ ಕಾಮಗಾರಿಯನ್ನು ಮಾಡುತ್ತಿದ್ದಾರೆ.

ಹಾರೂಗೇರಿಯ ರೈತ ಹಾಗೂ ಯುವ ರಾಜಕಾರಣಿ ದರೆಪ್ಪ ರಾಮತೀರ್ಥರವರು ಹೇಳುವಂತೆ ನಮ್ಮ ಹೊಲದಲ್ಲಿ ಹೇಳದೇ ಕೇಳದೇ ಅರ್ದದಷ್ಟು ಕಾಮಗಾರಿಯನ್ನು ಮಾಡಿಬಿಟ್ಟಿದ್ದಾರೆ. ನಮಗೆ ಹೇಳದೇ ಕೇಳದೇ ಹೇಗೆ ಮಾಡುತ್ತಿರಿ ಅಂತಾ ಅನ್ನಲು ಇದು ಸರಕಾರದ ಕೆಲಸ ನಮ್ಮ ಕೆಲಸವಲ್ಲಾ ಹೆಚ್ಚೆಗೆ ಮಾತನಾಡಿದರೆ ನಿಮ್ಮನ್ನು ಪೊಲೀಸರ ಮುಖಾಂತರ ವ್ಯವಸ್ಥೆ ಮಾಡುಸುತ್ತವೆ ಎಂದು ಧಮಕಿ ಹಾಕುತ್ತಾರೆ ಎಂದು ಹೇಳುತ್ತಾರೆ. ಮೊದಲೇ ಮಳೆ ಆಗಿಲ್ಲಾ ಸರಕಾರ ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಣೆ ಮಾಡಿದೆ ಅಂತಹದರಲ್ಲಿ ಇದ್ದ ಬೆಳೆಯನ್ನು ಕಡೆದು ಲೈನ ಕೆಲಸ ಮಾಡಿದರೆ ಹೇಗೆ ಎಂದು ಅನ್ನುತ್ತಾರೆ.
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ರೈತರ ಅನುಮತಿ ಪಡೆದು ಲೈನ್ ಕೆಲಸ ಮಾಡಿಸಲಿ ಇಲ್ಲವಾದರೆ ರೈತರು ಇಂತಹ ಅಕ್ರಮದ ವಿರೂದ್ದ ಹೊರಾಟಕ್ಕೆ ಇಳಿಯುತ್ತಾರೆಂದು ಧರೆಪ್ಪ ರಾಮತೀರ್ಥರವರು ಎಚ್ಚರಿಸುತ್ತಾರೆ.