ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಗಲ್ಲು ಶಿಕ್ಷೆ ಪ್ರಕಟಿಸಿದ ಬೆಳಗಾವಿ ಪೊಕ್ಸೊ ನ್ಯಾಯಾಲಯ.

ಬೆಳಗಾವಿ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಆರೋಪಿಗೆ ಪೊಕ್ಸೊ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.
ಜಿಲ್ಲೆಯ ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉಮೇಶ ಗಾಣಗೇರ್ ಎಂಬಾತ ಮೂರು ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕಬ್ಬಿನ ಪಡದಲ್ಲಿ ಮುಚ್ಚಿದ್ದನು, ಈ ರಾಯಬಾಗದ ಸಿ.ಪಿ.ಆಯ್. ಆಗಿದ್ದ ಸುರೇಶ ಸಿಂಗಿ ಇವರು ಪ್ರಕರಣವನ್ನು ಕೈಗೆ ತಗೆದುಕೊಂಡು ಆರೋಪಿ ವಿರುದ್ದ ಆರೋಪ ಪಟ್ಟಿಯನ್ನು ಬೆಳಗಾವಿಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇಂದು ಪೊಕ್ಸೊ ನ್ಯಾಯಾಲಯದ ನ್ಯಾಯಾದೀಶರಾದ ಪುಷ್ಪಲತಾ ಇವರು ಸದರಿ ಪ್ರಕರಣದಲ್ಲಿ ವಾದ ವಿವಾದಗಳು ಮುಗಿದನಂತರ ಇಂದು ಆರೋಪಿಗೆ ಗಲ್ಲು ಶಿಕ್ಷೆ ಹಾಗೂ ರೂ ೪೫೦೦೦ ದಂಡವನ್ನು ಪ್ರಕಟಿಸಿದ್ದಾರೆ.
ವಿಷೇಶ ಶೀಘ್ರಗತಿ ಪೊಕ್ಸೊ ನ್ಯಾಯಾಲಯ ಪ್ರಕರಣದಲ್ಲಿ ೨೫ ಸಾಕ್ಷಿಗಳನ್ನು ಹಾಗು ೫೨ ದಾಖಲಾತಿಗಳನ್ನು ಪರಿಗಣಿಸಿ ಈ ಆದೇಶವನ್ನು ಪ್ರಕಟಿಸಿದೆ. ಸಧ್ಯ ಬೆಳಗಾವಿಯ ಕಾಕತಿಯ ಇನ್ಸಪೆಕ್ಟರ್ ಆಗಿರುವ ಸುರೇಶ ಸಿಂಗೆಯವರು ತನಿಖೆ ಮಾಡಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು ಹಾಗು ಎಲ್ ವಿ ಪಾಟೀಲ್ ಇವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.