ಬೆಂಗಳೂರುಸುವರ್ಣ ಗಿರಿ ಟೈಮ್ಸ್
ವಿವಿದ ಯೋಜನೆಗಳಲ್ಲಿನ ಅಕ್ರಮವಾಗಿ ಫಲಾನುಭವಿಗಳ ಆಯ್ಕೆ: ಕ್ರಮಕ್ಕಾಗಿ ಮನವಿ.

ಬೆಳಗಾವಿ: ಜಿಲ್ಲೆಯ ಡಿ ದೇವರಾಜು ಅಭಿವೃದ್ಧಿ ನಿಗಮ ಹಾಗೂ ಇತರ ನಿಗಮಗಳಲ್ಲಿ ಅಕ್ರಮವಾಗಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದನ್ನು ರದ್ದು ಪಡಿಸಿ ನಿಯಮ ಪ್ರಕಾರ ಆಯ್ಕೆ ಮಾಡಬೇಕೆಂದು ಜಿ ಪಂ ಸಿ.ಇ.ಓ ಇವರಿಗೆ ಮನವಿ ನೀಡಲಾಗಿದೆ.
ಇಲಾಖೆಯಲ್ಲಿ ಗಂಗಾ ಕಲ್ಯಾಣ, ವಾಹನ ಖರೀದಿ ಸಾಲ, ಸ್ವಯಂ ಉಧ್ಯೋಗ ಸಾಲ, ಶಿಕ್ಷಣ ಸಾಲ, ಬ್ಯಾಂಕ ಸಹಾಯ ಧನದ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡದೇ ತಮಗೆ ಮನಸ್ಸಿಗೆ ಬಂದಂತೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ ಎಂದೂ ದೂರಲಾಗಿದೆ.
ಇಲಾಖೆಯಲ್ಲಿ 11 ಕ್ಕೂ ಹೆಚ್ಚು ನಿಗಮಗಳಿದ್ದು 14 ಕೋಟಿಗೂ ಅಧಿಕ ಹಣ ಕಾಯ್ದಿರಿಸಿದ್ದು 971 ಜನ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಗಾಗಿದೆ. ಒಟ್ಟು 27,2011 ಅರ್ಜಿಗಳು ಬಂದಿವೆ.
ಮನವಿಯನ್ನು ಕೊ ಸಮಯದಲ್ಲಿ ನಿಂಗಪ್ಪಾ ಭಜಂತ್ರಿ, ಚನ್ನಪ್ಪ ಪೂಜೇರಿ, ರಾಘವೇಂದ್ರ ನಾಯಿಕ, ರಾಮೂ ಪೂಜೇರಿ ಶ್ರೀನಿವಾಸಗೌಡಾ ಪಾಟೀಲ ಹಾಗೂ ಇತರರು ಇದ್ದರು.