ಹದಗೆಟ್ಟ ರಸ್ತೆ, ಚರಂಡಿ & ಗುಂಡಿ ಸಾರ್ವಜನಿಕರಿಂದ ದುರಸ್ತಿ.

ರಬಕವಿ-ಬನಹಟ್ಟಿ: ಹದಗೆಟ್ಟ ರಸ್ತೆ, ಚರಂಡಿ ಹಾಗೂ ಗುಂಡಿ ಸಾರ್ವಜನಿಕರ ದುರಸ್ತಿ ಮಾಡುವುದು ಕಂಡು ಬಂದಿದೆ. ನಗರಸಭೆಯಲ್ಲಿ ಎಲ್ಲವೂ ಕೆಲಸ ಮುಂದುವರೆಯುತ್ತಿದ್ದರೆ ರಸ್ತೆ ಮೇಲಿನ ಗುಂಡಿಗಳಿಗೆ ಮಾತರ ಬರವಿಲ್ಲದಂತಾಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಹಾಗು ಅವೈಜ್ಞಾನಿಕ ಚರಂಡಿಗಳ ನಿರ್ಮಾಣ ಕಾರ್ಯ ವಿಫಲಗೊಂಡು ಕಳಪೆ ಮಟ್ಟದ ಚರಂಡಿಗಳು ಒಡೆದು ಹೋಗಿರುವದನ್ನು ಸ್ವತಃ ಅಲ್ಲಲ್ಲಿ ಸಾರ್ವಜನಿಕರೇ ದುರಸ್ಥಿ ಮಾಡಿಕೊಳ್ಳುತ್ತಿರುವದು ಸುದ್ದಿಯಾಗುತ್ತಿದೆ.
ಬನಹಟ್ಟಿಯ ವೈಭವ ಚಿತ್ರಮಂದಿರ, ಸೋಮವಾರ ಪೇಟೆ, ಅಶೋಕ ಕಾಲನಿ, ಲಕ್ಷ್ಮೀ ನಗರ, ಮಂಗಳವಾರ ಪೇಟೆ ಹೀಗೆ ಹಲವಾರು ಕಡೆಗಳಲ್ಲಿ ಚರಂಡಿ ಹಾಗು ರಸ್ತೆಗಳಲ್ಲಿ ಹೆಚ್ಚಿರುವ ಗುಂಡಿಗಳನ್ನು ಮುಚ್ಚುವಲ್ಲಿ ಅಲ್ಲಲ್ಲಿ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಮುಂದಾಗಿ ಕೆಲಸವನ್ನು ಮಾಡುತ್ತಿದ್ದು, ಸ್ವಂತ ಖರ್ಚಿನಲ್ಲಿ ಸಿಮೆಂಟ್ ಕಾಂಕ್ರೀಟ್‌ನಿಂದ ಗುಂಡಿ ಮುಚ್ಚುವಲ್ಲಿ ಯುವಕರ ಕಾರ್ಯ ಮೆಚ್ಚುವಂಥದ್ದು.
ಕಳೆದೊಂದು ವರ್ಷದಿಂದ ಮೌಖಿಕ ಹಾಗು ಲಿಖಿತವಾಗಿ ನಗರಸಭೆಗೆ ದೂರು ನೀಡಿದರೂ ಯಾವದೇ ಪ್ರಯೋಜನವಾಗಿದೆ ಅಧಿಕಾರಿಗಳು ಮಾತ್ರ ಜಾಣ ಕುರುಡುನಂತೆ ಕಾರ್ಯ ನಿರ್ವಹಿಸುತ್ತಿರುವದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೀಗಾಗಿ ಇದರಿಂದ ಬೇಸತ್ತ ಯುವಕರ ತಂಡ ತಾವೇ ಗುಂಡಿ ಮುಚ್ಚಿ, ರಸ್ತೆ ರಿಪೇರಿ ಮಾಡಿ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇನ್ನು ರಾತ್ರಿ ವೇಳೆಯಲ್ಲಿ ಸಂಚಾರ ಕಡಿಮೆ ಸಮಯದಲ್ಲಿ ನಗರಾದ್ಯಂತ ಹೆಚ್ಚು ರಸ್ತೆಗಳ ಗುಂಡಿ ಮುಚ್ಚುವಲ್ಲಿ ಮುಂದಾಗಿದ್ದು, ನಗರಸಭೆ ಮಾಡುವ ಕೆಲಸವನ್ನು ಯುವಕರು ಮಾಡಿ ತೋರಿಸುತ್ತಿದ್ದಾರೆ.
ತಕ್ಷಣವೇ ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಂಡು ನಗರಸಭೆಗೆ ಶೀಘ್ರವೇ ಚುರುಕು ಆಡಳಿತ ನಡೆಸುವಲ್ಲಿ ಸಂದೇಶ ನೀಡಬೇಕಾದ ಅನಿವಾರ್ಯತೆಯಿದ್ದು, ಮುಂದಿನ ದಿನಗಳಲ್ಲಿ ಜನಸಾಮಾನ್ಯರು ನಗರಸಭೆ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆಯಾಗಲಿದೆ.