ಬಾಗಲಕೋಟೆಸುವರ್ಣ ಗಿರಿ ಟೈಮ್ಸ್
ಬಾಗಲಕೋಟ್: ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ಪ್ರಕರಣದಲ್ಲಿ ಆರು ಜನರ ಬಂಧನ.

ಬಾಗಲಕೋಟೆ: ಜನಸಾಮಾನ್ಯರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ರೈತ ಮುಖಂಡ ಯಲ್ಲಪ್ಪ ಹೆಗಡೆ ಹಲ್ಲೆ ಪ್ರಕರಣದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಅವರ ಸಹೋದರ ಸಂಗಮೇಶ ನಿರಾಣಿ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮರೇಗುದ್ದಿಯ ಬಸವರಾಜ ಪರೂತಬಾದಿ, ಬೈಲಹೊಂಗಲ ತಾಲ್ಲೂಕಿನ ಮೊಹರೆಯ ಅಶೋಕ ಕಲಗುಡಿ, ಕಿತ್ತೂರ ತಾಲ್ಲೂಕಿನ ಹಳಿಕಾದ್ರೊಳ್ಳಿಯ ಬಾಬು ಪಾಟೀಲ, ಕೊಡ್ರಳ್ಳಿಯ ಈರಣ್ಣ ಕುಲಕರ್ಣಿ, ಗೋಕಾಕ ಫಾಲ್ಸ್‌ನ ಉಮರಫಾರೂಕ್ ನದಾಫ್ ಮತ್ತು ಮುಗಳಖೋಡದ ರಾಜೇಸಾಬ ಹುನ್ನೂರ ಎಂಬುವರು ಬಂಧಿತರು. ಕೃತ್ಯಕ್ಕೆ ಬಳಸಿದ ಬುಲೆರೊ ವಾಹನ, ಕಾರದ ಪುಡಿ, ಕಬ್ಬಿಣದ ರಾಡು, ಬಡಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟ ಎಸ್ ಪಿ ರವರು ತಿಳಿಸಿದ್ದಾರೆ.