ಬೆಂಗಳೂರುಸುವರ್ಣ ಗಿರಿ ಟೈಮ್ಸ್
”ಕರ್ನಾಟಕ ಜನತೆಗೆ ಮತ್ತೊಂದು ಶಾಕ್ : ಅಕ್ಕಿ ದರ ಶೇ.15 ರಷ್ಟು ಏರಿಕೆ!

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಕರ್ನಾ ಟಕ ಜನತೆಗೆ ಮತ್ತೊಂದು ಶಾಕ್, ರಾಜ್ಯದಲ್ಲಿ ಈಗ ಅಕ್ಕಿ ಬೆಲೆಯು ಸರಾಸರಿ ಶೇ. 15 ರಷ್ಟು ಏರಿಕೆಯಾಗಿದೆ.
ಈ ವರ್ಷ ಮುಂಗಾರು ಮಳೆ ವಿಳಂಬ, ಕಳೆದ ವರ್ಷ ಸುರಿ ದ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾ ಗಿದ್ದು, ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.15 ರಷ್ಟು ಹೆಚ್ಚಳ ವಾಗಿದೆ ಎನ್ನಲಾಗಿದೆ.
ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ 50 ರೂ.ನಿಂದ ರಿಂದ 60 ರೂ.ಗೆ ಏರಿಕೆಯಾಗಿದೆ. ರಾಜಮುಡಿ ಅಕ್ಕಿ ಕೆ.ಜಿಗೆ 70 ರಿಂದ 74 ರೂ. ವರೆಗೆ ತಲುಪಿದೆ. ಬಿಪಿಎಲ್ ಕುಟುಂಬ ಗಳು ಬಳಸುವ ಅಕ್ಕಿ ಕೆಜಿಗೆ 30 ರೂ.ನಿಂದ 36 ಕ್ಕೆ ಏರಿಕೆಯಾಗಿದೆ. ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆ ಆಗಿಲ್ಲ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣ ಗೊಂಡಿಲ್ಲ ಹೀಗಾಗಿ ಅಕ್ಕಿ ಬೆಲೆಯಲ್ಲಿ ಏರಿಕೆಗೆ ಕಾರಣ ವಾಗಿದೆ ಎನ್ನಲಾಗಿದೆ.