ಬೆಳಗಾವಿಸುವರ್ಣ ಗಿರಿ ಟೈಮ್ಸ್

ಚಿಕ್ಕೋಡಿ: ಉಧ್ಯೋಗ ಖಾತ್ರಿಯಲ್ಲಿ ತಾಲೂಕಿನ ತುಂಬ ಅಕ್ರಮ: ತನಿಖೆಗೆ ಒತ್ತಾಯ.

ಚಿಕ್ಕೋಡಿ: ತಾಲೂಕಿನ 6 ಗ್ರಾಮ ಪಂಚಾಯತಿಗಳಲ್ಲಿ ನರೇಗಾದ ಉಧ್ಯೋಗ ಖಾತ್ರಿ ಯೋಜನೆಯಲ್ಲಿ ಜೈನಾಪುರ, ಯಡೂರ, ಅಂಕಲಿ, ಹತ್ತರವಾಟ, ಪಟ್ಟಣಕುಡಿ, ಜನವಾಡ, ಹಿರೇಕೋಡಿ, ಶಿರಗಾಂವ ಗ್ರಾಮ ಪಂಚಾಯತಿಗಳು ಸೇರಿದಂತೆ ತಾಲೂಕಿನ ಇನ್ನುಳಿದ ಪಂಚಾಯತಿಗಳಲ್ಲಿ ಕೂಲಿಗಳ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಕೀಲರು ಹಾಗೂ ಪರಿಸರವಾದಿ ಸುರೇಂದ್ರ ಉಗಾರೆ ಅವರು ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಅಕ್ರಮಕ್ಕೆ ಕಾರಣರಾಗಿರುವ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಿರ್ದೇಶಕರು ಮತ್ತು ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಅಭಿವೃದ್ದಿ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿಬೇಕು ಎಂದು ಒತ್ತಾಯಿಸಿದ್ದಾರೆ.ಅಕ್ರಮ ನಡೆದಿರುವ ಜಾಬ್ ಕಾರ್ಡಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.ಜೈನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 21-11-2024 ರಂದು ಒಟ್ಟು 61 ಕಾಮಗಾರಿಗಳನ್ನು ಮಾಡಲಾಗಿದೆ. ಆಯ್ದ ಕಾಮಗಾರಿಗಳ ಕ್ರಮ ಸಂಖ್ಯೆ 1 ರಿಂದ 6 ಹಾಗೂ 49 ರಿಂದ 58 ರ ಕಾಮಗಾರಿಗಳನ್ನು ಮಾಡಿ ಅಂತರಜಾಲದಲ್ಲಿ ಹಾಕಿದ ಪೋಟೊಗಳ ಪ್ರಕಾರ ಅಲ್ಲಿ ಮಹಿಳೆಯರೇ ಇಲ್ಲಾ ಆದರೂ ಮಹಿಳೆಯರ ಹೆಸರು ಹಾಕಿ ಹಣ ತೆಗೆಯಲಾಗಿದೆ.

ಯಡೂರ ಗ್ರಾಮ ಪಂಚಾಯತಿಯಲ್ಲಿ 23-04-2025 ರಂದು ಒಟ್ಟು 6 ಕಾಮಗಾರಿಗಳನ್ನು ಮಾಡಲಾಗಿದ್ದು ಆಯ್ದ ಕಾಮಗಾರಿಗಳ ಕ್ರಮ ಸಂಖ್ಯೆ 2 ಮತ್ತು 3 ರಲ್ಲಿ ಒಂದೇ ಪೋಟೊವನ್ನು ಎರಡು ಕಾಮಗಾರಿಯಲ್ಲಿ ಬಳಕೆ ಮಾಡಲಾಗಿದೆ.ಅದೇ ರೀತಿ ಕಾಮಗಾರಿ 6 ರಲ್ಲಿ ಮತ್ತು 7 ರಲ್ಲಿ ಕಾಮಗಾರಿ ಮಾಡಿದ ಪೋಟೊದಲ್ಲಿ ಮಹಿಳೆಯರ ಇಲ್ಲಾ.ಅಂಕಲಿ ಗ್ರಾಮ ಪಂಚಾಯತಿ 23-04-2025 ರಂದು 13. ಕಾಮಗಾರಿಗಳನ್ನು ಮಾಡಿದ್ದು ಅದರಲ್ಲಿ ಆಯ್ದ ಕಾಮಗಾರಿಗಳ ಕ್ರಮ ಸಂಖ್ಯೆಬ1 ಮತ್ತು 2 ರಲ್ಲಿ ಒಂದನೆಯ ಕಾಮಗಾರಿಯಲ್ಲಿದ್ದವರೇ ಎರಡನೇ ಕಾಮಗಾರಿಯಲ್ಲಿದ್ದಾರೆ.ಅದೇ ರೀತಿ ಒಂದನೇಯ ಕಾಮಗಾರಿಯಲ್ಲಿ9 ಜನರಿದ್ದಾರೆ. ಪೋಟೊದಲ್ಲಿ 10 ಜನರನ್ನು ತೋರಿಸಲಾಗಿದೆ. ಹತ್ತರವಾಟ ಗ್ರಾಮ ಪಂಚಾಯತಿಯಲ್ಲಿ 23-04-2025 ರಂದು ಒಟ್ಟು 8 ಕಾಮಗಾರಿಗಳನ್ನು ಮಾಡಿದ್ದು ಅದರಲ್ಲಿ ಆಯ್ದ ಕಾಮಗಾರಿಗಳಲ್ಲಿ ಕ್ರಮ ಸಂಖ್ಯೆ ಒಂದರಲ್ಲಿ ಇದ್ದವರೇ ಎರಡನೇಯ ಕಾಮಗಾರಿಯಲ್ಲಿದ್ದಾರೆ. ಇನ್ನುಳಿದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ.ಪಟ್ಟಣಕುಡಿ ಗ್ರಾಮ ಪಂಚಾಯತಿಯಲ್ಲಿ 23-04-2025 ರಂದು ಒಟ್ಟು 6 ಕಾಮಗಾರಿಗಳನ್ನು ಮಾಡಿದ್ದು ಅದರಲ್ಲಿ ಸಂಖ್ಯೆ 1 ರ ಕಾಮಗಾರಿಯಲ್ಲಿದ್ದವರೇ ಎರಡನೆ ಕಾಮಗಾರಿಯಲ್ಲಿದ್ದಾರೆ.ಮೂರನೆ ಕಾಮಗಾರಿಯಲ್ಲಿದ್ದವರೇ ನಾಲ್ಕನೆ ಕಾಮಗಾರಿಯಲ್ಲಿದ್ದಾರೆ. ಜನವಾಡ ಗ್ರಾಮ ಪಂಚಾಯತಿಯಲ್ಲಿ 23-04-2025 ರಂದು ಒಟ್ಟು 2 ಕಾಮಗಾರಿಗಳನ್ನು ಮಾಡಿದ್ದು. ಕ್ರಮ ಸಂಖ್ಯೆ ಒಂದರಲ್ಲಿ ಇದ್ದವರೇ ಎರಡನೆ ಕಾಮಗಾರಿಯಲ್ಲಿದ್ದಾರೆ. ಒಂದನೆಯ ಕಾಮಗಾರಿಯಲ್ಲಿ ನೀಲಿ ಬಟ್ಟೆ ಹಾಕಿದ್ದಾರೆ. ಎರಡನೆ ಕಾಮಗಾರಿಯಲ್ಲಿ ನೀಲಿ ಬಟ್ಟೆ ಹಾಕಿದವರೇ ಇದ್ದಾರೆ ಎಂದರು.

ತಾಲೂಕಿನ ಇನ್ನುಳಿದ ಗ್ರಾಮ ಪಂಚಾಯತಿಗಳಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ ಎಂಬುದು ಮೆಲ್ನೋಟಕ್ಕೆ ಕಂಡು ಬರುತ್ತದೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಹಾಯಕ ನಿರ್ದೇಶಕರು, ಪಿಡಿಒ ಹಾಗೂ ಕಾಮಗಾರಿಯ ಪೊಟೊಗಳನ್ನು ಅಂತರಜಾಲದಲ್ಲಿ ಅಪ್ಲೋಡ್ ಮಾಡಿದವರ ಮೇಲೆ ಕ್ರಮ ತಗೆದುಕೊಳ್ಳಬೇಕು ಹಾಗು ಅದರ ಪ್ರಕಾರ ಉಳಿದ ಪಂಚಾಯತಿಗಳಲ್ಲಿಯೂ ತನಿಖೆ ಮಾಡಲು ಒತ್ತಯ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button