ಯುವಪೀಳಿಗೆ ಶಾಸ್ತ್ರೀಯ ಸಂಗೀತವನ್ನು ರೂಢಿಸಿಕೊಳ್ಳಲಿ: ಶಿಕ್ಷಣತಜ್ಞ ನಾಗೇಶ ಅಣ್ಣಿಗೇರಿ.
ಧಾರವಾಡ: ಪಂ. ಪುಟ್ಟರಾಜ ಗವಾಯಿಗಳು ಬಹಳಷ್ಟು ಜನರಿಗರ ದಾರಿದೀಪವಾದವರು. ಶಾಸ್ತ್ರೀಯ ಸಂಗೀತದಿಂದ ಮನಸ್ಸಿನ ನೆಮ್ಮದಿ, ಆರೋಗ್ಯಕರ ಜೀವನ ಸಾದ್ಯವಾಗುವುದು ಎಂದು ವಾಯ್ ಬಿ ಅಣ್ಣಿಗೇರಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅಧ್ಯಕ್ಷರು, ಶಿಕ್ಷಣತಜ್ಞರಾದ ನಾಗೇಶ ಅಣ್ಣಿಗೇರಿ ಹೇಳಿದರು.
ಅವರು ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಇವರ ಸಹಯೋಗದಲ್ಲಿ ಪಂ. ಪುಟ್ಟರಾಜ ಗವಾಯಿಗಳ 14 ನೆಯ ಪುಣ್ಯಸ್ಮರಣೆ ಅಂಗವಾಗಿ ಕರ್ನಾಟಕ ಕುಲಪುರೋಹಿತ ಶ್ರೀ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹಮ್ಮಿಕೊಂಡ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿ ಯುವಪೀಳಿಗೆ ಡಿ.ಜೆ ಸಂಸ್ಕೃತಿಯ ಬೆನ್ನು ಹತ್ತದೇ ಮನಸ್ಸಿಗೆ ಮತ್ತು ಮೆದುಳಿಗೆ ಹಿತವನ್ನುಂಟು ಮಾಡುವ ಶಾಸ್ತ್ರೀಯ ಸಂಗೀತ ದೆಡೆಗೆ ಯುವಕರು ಸಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಮಾತನಾಡಿ ಸಂಗೀತ ಕೇಳುವುದರಿಂದ ಮಾನಸಿಕವಾಗಿ ಹಾಗೂ ಉಲ್ಲಾಸವಾಗಿ ಇರಲು ಸಾಧ್ಯವಾಗುತ್ತದೆ ಹಾಗೂ ಸಾಕಷ್ಟು ರೋಗಗಳಿಗೂ ಸಂಗೀತ ಚಿಕಿತ್ಸೆ ಯಾಗಿದೆ ಎಂದು ಹೇಳಿದರು.
ಕೆ. ಇ ಬೋರ್ಡ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಮೋಹನ ಸಿದ್ಧಾಂತಿ ಮಾತನಾಡಿ ಕಣ್ಣಿದ್ದವರಿಗಿಂತ ವಿಶೇಷ ಚೇತನರಿಗೇ ಸಾಮರ್ಥ್ಯ ಹೆಚ್ಚಾಗಿರುತ್ತದೆ ಅದರ ಸದ್ಬಳಕೆಯನ್ನು ಇಂತಹ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಪಂ ಪುಟ್ಟರಾಜರ ಬದುಕು ನಮಗೆಲ್ಲ ಆದರ್ಶ ಎಂದು ಹೇಳಿದರು.
ಕರ್ನಾಟಕ ಥಿಂಕರ್ಸ್ ಫೋರಂ ರಾಜ್ಯ ಘಟಕದ ಅಧ್ಯಕ್ಷರಾದ ಪಿ.ಎಚ್. ನೀರಲಕೇರಿ ಮಾತನಾಡಿ ಎಲ್ಲರನ್ನೂ ಕೂಡಿಸಿಕೊಂಡು ಮುನ್ನಡೆದ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ, ಇಂತಹ ಕಾರ್ಯಕ್ರಮಗಳನ್ನು ಮಾರ್ತಾಂಡಪ್ಪ ಕತ್ತಿ ನಿರಂತರವಾಗಿ ಹಮ್ಮಿಕೊಂಡುವ ಯುವಕರಿಗೆ ಮಾದರಿಯಾಗಿದ್ದಾರೆ, ಸಂಗೀತ ಒಂದು ಅದ್ಭುತ ಶಕ್ತಿ ಅದಕ್ಕೆ ಮರುಳಾಗದವರು ಯಾರಿಲ್ಲ ಎಂದು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಪ್ರಕಾಶ ಉಡಿಕೇರಿ ಮಾತನಾಡಿ ಕಲಾವಿದರಿಗೆ, ಶಾಸ್ತ್ರೀಯ ಸಂಗೀತಕ್ಕೆ , ಕಲೆಗೆ ಇಂದು ಎಷ್ಟು ಬೆಲೆ ಕೊಡುತ್ತಿದ್ದೇವೆ ಎನ್ನುವುದನ್ನು ನಾವೆಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ, ಕಲಾವಿದರ ಪರಿಶ್ರಮ, ಅವರ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅವರನ್ನು ನಾವೆಲ್ಲರೂ ಗೌರವದಿಂದ ಕಾಣಬೇಕೆಂದು ಹೇಳಿದರು.
ಹುಬ್ಬಳ್ಳಿಯ ಐಟಿಐ ಕಾಲೇಜಿನ ಪ್ರಾಚಾರ್ಯರಾದ ರಾಜೇಶ ಹೊಂಗಲ, ಮಾತನಾಡಿದರು ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಡಾ. ಉದಯ ರಾಯ್ಕರ ಅಧ್ಯಕ್ಷೀಯ ನುಡಿಗಳನ್ನಾಡಿ ಯುವಕರು ಸಂಗೀತದಲ್ಲಿ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಲಾ ಪ್ರತಿಷ್ಠಾನ ಧಾರವಾಡ ಅಧ್ಯಕ್ಷರಾದ ಶ್ರೀ ಎಮ್ ಎಸ್ ಫರಾಸ, ಹೆಬ್ಬಳ್ಳಿಯ ನೆಹರು ಪಿ ಯು ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ ಆರ್ ರಾಠೋಡ, ಶಿಕ್ಷಣ ಇಲಾಖೆಯ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕರಾದ ಈಶ್ವರ ಪಶುಪತಿಹಾಳ,ಸಮಾಜ ಸೇವಕರಾದ ಮುರಘೇಂದ್ರ ಸಿ ಯಲಿಗಾರ, ಹಿರಿಯ ಪತ್ರಕರ್ತರಾದ ಬಸವರಾಜ ಆನೇಗುಂದಿ, ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಬಿ ಪಾಟೀಲ, ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ ಸರ್ಜಾಪುರ ವೇದಿಕೆಯಲ್ಲಿದ್ದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಶ್ರೀಮತಿ ಪಂ.ರಾಧಿಕಾ ಕಾಖಂಡಕಿ, ಗಾಯಕರಾದ ಅಶೋಕ ನಿಂಗೋಲಿ, ಚೈತ್ರಾ ಆಲೂರ ಸಂಗೀತ ಕಚೇರಿ ನಡೆಸಿಕೊಟ್ಟರು. ಇವರಿಗೆ ಹಾರ್ಮೋನಿಯಮ್ ಸಾಥನ್ನು ವಿನೋದ ಪಾಟೀಲ ಹಾಗೂ ವಾದಿರಾಜ ದಂಡಾಪೂರ ಇವರು ತಬಲಾ ಸಾಥ ನೀಡಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸವದತ್ತಿಯ ನಾಗರಾಜ ಭೋನಗೇರಿ, ಪುಂಡಲೀಕ ಬಾಳೋಜಿ, ಗಿರೀಶಪ್ರಸಾದ ರೇವಡಿ, ಮಹಮ್ಮದ ಯಲಿಗಾರ, ಬೋಪಾಲ ಭಾಂಡೇಕರ, ಪ್ರಭು ಪ್ರಭನ್ನವರ, ಡಾ. ಹೇಂಮತ ಭಸ್ಮೆ, ಡಾ. ಅಯ್ಯನಗೌಡ ಕಬ್ಬೋರ, ತವನಪ್ಪ ಸದರೆ, ಉಮೇಶ ಒಕ್ಕುಂದ ಸುರೇಶ ಸಂಪಗಾಂವಿ, ಮಲ್ಲಿಕಾರ್ಜುನ ಬೀಳಗಿ, ಡಾ.ರಾಜು ಪಾಯಣ್ಣವರ, ಅರವಿಂದ ಇಜಂತಕರ್, ಪ್ರವೀಣಕುಮಾರ ಅವಗಡನವರ, ಶಿಕ್ಷಕರಾದ ರಾಜೇಂದ್ರ ಮರಿಗೌಡ್ರ, ಕವಿತಾ ರಾಶಿನಕರ್, ಉಮಾ ಮರಾಠೆ, ಬಿ.ಎಸ್ ಯರಗಟ್ಟಿ, ಇಮ್ರಾನ್ ರಾಣೆಬೆನ್ನೂರ, ಸಂಜಿಉವ ಕುಂದಗೋಳ ಎಸ್ ಎಲ್ ಶೇಖರಗೋಳ, ಕುಸ್ತಿಪಟು ಬಸವರಾಜ ವಡ್ಡರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರೇಮಾನಂದ ಶಿಂಧೆ ಪ್ರಾರ್ಥಿಸಿದರು. ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಬೆಟಗೇರಿ ವಂದಿಸಿದರು. ಕು.ಸಂಜನಾ ಎಸ್ ಎಮ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಶೈಲ ಚಿಕನಳ್ಳಿ, ನಾಗರಾಜ ಇಟಗಿ, ಹ ವೇ ಕಾಖಂಡಕಿ, ಕಾರ್ಯಕ್ರಮದಲ್ಲಿದ್ದರು.