ಜಾರ್ಖಂಡ್ಸುವರ್ಣ ಗಿರಿ ಟೈಮ್ಸ್
ಜಾರ್ಖಂಡ್: ದಲೀತರಿಗೆ ಇನ್ಮುಂದೆ 50 ಕ್ಕೆ ಪಿಂಚಣಿ ಆದೇಶ.

ರಾಂಚಿ: ಲೋಕಾ ಚುನಾವಣೆ ಮುಂದಿಟ್ಟುಕೊಂಡು ಮತಬೇಟೆಯಾಡಲು ದಲೀತರಿಗೆ ಹಾಗು ಗುಡ್ಡಗಾಡು ಜನರಿಗೆ 60 ರ ಬದಲಿಗೆ 50 ನೇ ವರ್ಷಕ್ಕೆ ಪಿಂಚನಿಯ ಸೌಲಭ್ಯವನ್ನು ಜಾರ್ಖಂಡ ಸರಕಾರ ಆದೇಶ ಮಾಡಿದೆ.
ಜೆ ಎಮ್ ಎಮ್ ಪಕ್ಷದ ಮುಖ್ಯ ಮಂತ್ರಿ ಹೇಮಂತ ಸೂರೇನ್ ರಾಂಚಿಯಲ್ಲಿ ಹೊಸ ಹೇಳಿಕೆ ನೀಡಿ ದಲೀತರ ಹಾಗೂ ಗುಡ್ಡ- ಗಾಡು ಜನರ ಮತ ಬೇಟೆಗೆ ಇಳಿದಿದ್ದಾರೆ.
ರಾಜ್ಯದಲ್ಲಿ ದಲೀತರು 13% ಹಾಗೂ ಗುಡ್ಡಗಾಡು ಜನರು 27% ರಷ್ಟು ಇದ್ದು, ಈ ಜನರಿಗೆ ನೌಕರಿ ಸಿಗಲ್ಲಾ ಹಾಗೂ ಸರಕಾರಿ ಸೌಲಭ್ಯಗಳು ಅಂತೂ ಸಿಗಲ್ಲಾ ಹಾಗಾಗಿ ಸರಕಾರ ಇಂತಹ ಒಂದು ಸೌಲಭ್ಯ ಕೊಡಲು ಮುಂದಾಗಿದೆ ಎಂದು ಹೇಳಿದ್ದಾರೆ.
ಇದೇ ಮಾದರಿಯನ್ನು ಪಾಲನೆ ಉಳಿದ ಇಂಡಿಯಾ ಮೈತ್ರಿಕೂಟದ ರಾಜ್ಯಗಳು ಅನುಸರಿಸಿದರೆ ಮುಂದೆ ಬರುವ ಲೋಕಾ ಚುನಾವಣೆಗೆ ಎನ್.ಡಿ.ಎ. ಮೈತ್ರಿಗೆ ಪಕ್ಕಾ ಹೊಡೆತ ಬಿಳಲಿದೆ ಎಂದು ರಾಜಕೀಯ ಚಿಂತಕರು ಅನ್ನುತ್ತಿದ್ದಾರೆ.