ಬಿಹಾರಸುವರ್ಣ ಗಿರಿ ಟೈಮ್ಸ್

ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್​ ಮಾಡಿದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌​ ಅಮಾನತು !!

ಬಿಹಾರ: ಬಿಹಾರ ರಾಜ್ಯದಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್​ ಮಾಡಿದ್ದಕ್ಕೆ ಮಹಿಳಾ ಕಾನ್ಸ್‌ಟೇಬಲ್‌​ನನ್ನು ಅಮಾನತು ಮಾಡಿರುವ ಘಟನೆ ನಡೆದಿದೆ. ಖುಷ್ಬೂ ಕುಮಾರಿ ಅಮಾನತ್ತಾದ ಮಹಿಳಾ ಕಾನ್ಸ್‌ಟೇಬಲ್‌.​ ಮಹಾಬೋಧಿ ದೇವಸ್ಥಾನದೊಳಗೆ ಮಹಿಳಾ ಕಾನ್ಸ್‌ಟೇಬಲ್‌​ವೊಬ್ಬರು ರೀಲ್ಸ್​​ ಮಾಡುವ ಮೂಲಕ ಯಡವಟ್ಟಿಗೆ ಸಿಲುಕಿಕೊಂಡಿದ್ದಾರೆ.

ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ ಮಹಿಳಾ ಕಾನ್‌ಸ್ಟೇಬಲ್​​​ನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ದೇವಾಲದಲ್ಲಿ ‘ಓ ಮೇರಿ ಜಾನ್, ಹೇ ಓ ಮೇರಿ ಜಾನ್’ ಎಂಬ ಹಾಡಿಗೆ ಡ್ಯಾನ್ಸ್​​ ಮಾಡುತ್ತಾ ರೀಲ್ಸ್​ ರೆಕಾರ್ಡ್​ ಮಾಡಿದ್ದಾರೆ. ಆ ರೀಲ್ಸ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವೈರಲ್​ ಆದ ವಿಡಿಯೋ ಗಮನಿಸಿದ ಉಪವಿಭಾಗದ ಪೊಲೀಸ್ ಅಧಿಕಾರಿ, ಬೋಧಗಯಾ, ಪೊಲೀಸ್ ಇನ್ಸ್‌ಪೆಕ್ಟರ್ ಕಮ್ ಸ್ಟೇಷನ್ ಹೆಡ್ ತನಿಖೆ ನಡಸಿ ಮಹಿಳಾ ಕಾನ್‌ಸ್ಟೆಬಲ್​​​ ಅನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಮಹಾಬೋಧಿ ದೇವಾಲಯದ ಒಳಗೆ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಆದರೂ ತಿಳುವಳಿಕೆಯಿದ್ದ ಪೊಲೀಸ್​ ಕಾನ್‌ಸ್ಟೆಬಲ್ ಹೀಗೆ ರೀಲ್ಸ್​​ ಮಾಡಿ ಪೋಸ್ಟ್​ ಮಾಡಿದ್ದರಿಂದ ಕೆಲಸದಿಂದ ಅವರನ್ನು ತೆಗೆದು ಹಾಕಲಾಗಿದೆ.

Related Articles

Leave a Reply

Your email address will not be published. Required fields are marked *

Back to top button