ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಐದು ಲಕ್ಷ ಸಹಿ ಅಭಿಯಾನ: ಪ್ರಮೋದ ಮುತಾಲಿಕ

ಧಾರವಾಡ: ಭಾರತ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಲು ಐದು ಲಕ್ಷ ಸಹಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಕರೂಪದ ನಾಗರಿಕ ಸಂಹಿತೆ ಈ ವಿಷಯದ ಕುರಿತು ಇಡೀ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ. ಈ ದೇಶದಲ್ಲಿ ಒಂದೇ ಕಾನೂನು ಇರಬೇಕು ಎನ್ನುವುದಕ್ಕೆ ಬೆಂಬಲವನ್ನ ಸೂಚಿಸುತ್ತಿದ್ದೇವೆ. ಇಡೀ ಜಗತ್ತಿನಲ್ಲಿ ಎರಡೆರಡು ಕಾನೂನುಗಳು ಯಾವ ದೇಶದಲ್ಲೂ ಇಲ್ಲ. ಇದು ನಮ್ಮ ಭಾರತ ದೇಶದಲ್ಲಿ ಮಾತ್ರ ಇದೆ. ಧರ್ಮದ ಅನುಸಾರ ಕಾನೂನುಗಳನ್ನು ರಚನೆ ಮಾಡಿಕೊಂಡು ಮತ್ತು ಇವತ್ತು ಅಸ್ವಸ್ಥತೆ,ಅಸುರಕ್ಷತೆ ಮತ್ತು ಅಜ್ಞಾನದ ಪರಮಾವಧಿಗೆ ದೇಶ ತಲುಪಿದೆ. ಪ್ರಧಾನಿ ನರೇಂದ್ರ ಮೋದಿಯವರು ಏಕರೂಪ ನಾಗರಿಕ ಸಂಹಿತೆ ಕೂಡಲೇ ಜಾರಿಗೆ ಮಾಡುವುದಕ್ಕಾಗಿ ಕರ್ನಾಟಕದಲ್ಲಿ ಶ್ರೀರಾಮ ಸೇನೆ ಸಂಘಟನೆಯಿಂದ ಸಹಿ ಅಭಿಯಾನವನ್ನು ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಸಮಾನ ನಾಗರಿಕ ಸಂಹಿತೆ ಅನ್ನುವಂತದ್ದು ಯಾವುದೇ ಧರ್ಮಕ್ಕೆ ಜಾತಿಗೆ, ಯಾವುದೇ ಪಂತಕ್ಕೆ, ಯಾವುದೇ ತೊಂದರೆ ಇಲ್ಲ. ಇದಕ್ಕೆ ನಮ್ಮ ಬೆಂಬಲ ಇದ್ದು ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಐದು ಲಕ್ಷ ಸಹಿ ಸಂಗ್ರಹಿಸಿದ ಪ್ರತಿಗಳನ್ನು ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸುತ್ತಿದ್ದೇವೆ. ಏಕರೂಪ ನಾಗರಿಕ ಸಂಹಿತೆ ಅಂದ್ರೆ ಏನು? ಇದರ ಪರಿಜ್ಞಾನದ ಜನರಿಗೆ ಬರಬೇಕು. ಈ ಹಿನ್ನೆಲೆಯಲ್ಲಿ ಶ್ರೀ ರಾಮ ಸೇನೆ ಅಭಿಯಾನ ಪ್ರಾರಂಭ ಮಾಡಲಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಚಿತ್ರ ನಟರು, ಡಾಕ್ಟರ್ಸ್, ವಕೀಲರು, ವ್ಯಾಪಾರಸ್ಥರು, ಸಾಧು ಸಂತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಈ ಅಭಿಯಾನಕ್ಕೆ ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.